ದೇಶ

ಸೆ.30ರೊಳಗೆ ಶರಣಾಗಿ: ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಗೆ ಸುಪ್ರೀಂ ಸೂಚನೆ

Lingaraj Badiger
ನವದೆಹಲಿ: ಸೆಪ್ಟೆಂಬರ್ 30ರೊಳಗೆ ಕೋರ್ಟ್ ಗೆ ಶರಣಾಗುವಂತೆ ಸಾವಿರಾರು ಹೂಡಿಕೆದಾರರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಹರಾ ಸಂಸ್ಥೆಯ ಮುಖ್ಯಸ್ಥ ಸುಬ್ರತಾ ರಾಯ್ ಶುಕ್ರವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಂದು ಬೆಳಗ್ಗೆಯಷ್ಟೇ ಸುಪ್ರೀಂ ಕೋರ್ಟ್ ಕಳೆದ ಮೇ ತಿಂಗಳಿನಿಂದ ಪೆರೋಲ್ ಮೇಲೆ ಹೊರಗಿರುವ ಸುಬ್ರತೋ ರಾಯ್  ಅವರ ಪೆರೋಲ್ ಅವಧಿಯನ್ನು ವಿಸ್ತರಿಸಲು ಕೋರ್ಟ್ ನಿರಾಕರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್,ಥಾಕೂರ್ ನೇತೃತ್ವದ ಸುಪ್ರೀಂ ಪೀಠ ರಾಯ್ ಅವರ ಪೆರೋಲ್ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಪೆರೋಲ್ ರದ್ದುಗೊಳಿಸಿದ ಆದೇಶವನ್ನು ಹಿಂಪಡೆಯುವಂತೆ ಸಹರಾ ಸಲ್ಲಿಸಿದ್ದ ಅರ್ಜಿಯನ್ನು ಸೆ.28ಕ್ಕೆ ವಿಚಾರಣೆ ಮಾಡುವುದಾಗಿ ಹೇಳಿದೆ.
ಈ ಮೊದಲು ಪೆರೋಲ್ ವಿಸ್ತರಿಸಲು 300 ಕೋಟಿ ಹೆಚ್ಚುವರಿ ಹಣವನ್ನು ಜಮಾ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿತ್ತಾದರೂ ಇದಕ್ಕೆ ಸುಬ್ರತೋರಾಯ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 
ಸುಬ್ರತೋ ರಾಯ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಧವನ್ ಅವರು, ಸುಬ್ರತೋ ರಾಯ್ ಅವರು ಆಸ್ತಿ ಮಾರಾಟ ಮಾಡಿ  ಷೇರುದಾರರಿಗೆ ಹಣ ನೀಡಲು ಸೆಬಿಯ ನೀತಿಗಳು ಅಡ್ಡಿಯಾಗಿವೆ. ಷೇರುದಾರರಿಗೆ ಹಣ ನೀಡುವ ಪ್ರಕ್ರಿಯೆಗಾಗಿ ಅವರ ಉಪಸ್ಥಿತಿ ಅನಿವಾರ್ಯವಾಗಿದೆ. ಹೀಗಾಗಿ ಅವರ ಪೆರೋಲ್  ಅವಧಿಯನ್ನು ವಿಸ್ತರಿಸಬೇಕು ಎಂದು ವಾದ ಮಂಡಿಸಿದರು.
SCROLL FOR NEXT