ದೇಶ

ಉತ್ತರ ಪ್ರದೇಶದಲ್ಲಿ 10 ರೂ. ನಾಣ್ಯ ನಿರಾಕರಿಸಿದರೆ ಅದು ರಾಷ್ಟ್ರದ್ರೋಹ!

Srinivas Rao BV

ಆಗ್ರಾ: ಉತ್ತರ ಪ್ರದೇಶದಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಸುಳ್ಳು ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, 10 ರೂ ನಾಣ್ಯವನ್ನು ಸ್ವೀಕರಿಸಲು ಹಿಂಜರಿದರೆ ಅಂಥವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

10 ರೂಪಾಯಿ ನಾಣ್ಯ ಚಲಾವಣೆಯಲ್ಲಿಲ್ಲವೆಂಬ ಸಂದೇಶಗಳು ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದ್ದ ಪರಿಣಾಮ ಕಳೆದ 2-3 ತಿಂಗಳಿನಿಂದ 10 ರೂ ನಾಣ್ಯ ಚಲಾವಣೆಗೆ ಹೊಡೆತಬಿದ್ದಿತ್ತು. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಪುಲ್ಕಿತ್ ಶರ್ಮಾ ಎಂಬುವವರ ಬಳಿ ಕಳೆದ 2-3 ತಿಂಗಳಿನಿಂದ ಸಂಗ್ರಹಿಸಿಟ್ಟಿದ್ದ 10 ರೂ ನಾಣ್ಯಗಳ ರಾಶಿ ಇದೆ. 10 ರೂ ನಾಣ್ಯಗಳನ್ನು ನಿರಾಕರಿಸುವವರ ವಿರುದ್ಧ ಜಿಲ್ಲಾಡಳಿತ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ಬಳಿಕ ಪುಲ್ಕಿತ್ ಶರ್ಮಾ ತಮ್ಮ ಬಳಿ ಇರುವ ನಾಣ್ಯಗಳನ್ನು ಸುಲಭವಾಗಿ ಚಲಾವಣೆ ಮಾಡಬಹುದಾಗಿದೆ.

10 ರೂ ನಾಣ್ಯ ರಾಷ್ಟ್ರೀಯ ಕರೆನ್ಸಿಯಾಗಿದ್ದು, ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಆರ್ ಬಿಐ ನ ನಿಯಮಗಳ ಪ್ರಕಾರ ಭಾರತದ ಕರೆನ್ಸಿಯನ್ನು ನಿರಾಕರಿಸುವವರ ವಿರುದ್ಧ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಬಹುದಾಗಿದೆ ಎಂದು ಆಗ್ರಾದ ಜಿಲ್ಲಾಧಿಕಾರಿ ಮಾಸೂಮ್ ಅಲಿ ಎಚ್ಚರಿಸಿದ್ದಾರೆ.

SCROLL FOR NEXT