ಪಠಾಣ್ ಕೋಟ್ ನಲ್ಲಿ ಭದ್ರತಾ ಸಿಬ್ಬಂದಿ (ಚಿತ್ರ ಕೃಪೆ ಎಎನ್ಐ)
ಪಠಾಣ್ ಕೋಟ್: ಕೆಲವು ವ್ಯಕ್ತಿಗಳು ಪಠಾಣ್ ಕೋಟ್ - ಡಾಲ್ ಹೌಸೀ ರಸ್ತೆಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಮಾಹಿತಿ ಬಂದ ಹಿನ್ನಲೆಯಲ್ಲಿ ಪಠಾಣ್ ಕೋಟ್ ನಲ್ಲಿ ಮಂಗಳವಾರ ಹೈಅಲರ್ಟ್ ಘೋಷಿಸಲಾಗಿದೆ ಮತ್ತು ಶೋಧ ಕಾರ್ಯಾಚರಣೆ ಸಹ ಆರಂಭಿಸಲಾಗಿದೆ.
ಕಳೆದ ಜನವರಿಯಲ್ಲಿ ಉಗ್ರ ದಾಳಿಗೆ ತುತ್ತಾಗಿದ್ದ ಪಠಾಣ್ ಕೋಟ್ ವಾಯುನೆಲೆ ಸುತ್ತ ಪಂಜಾಬ್ ಸರ್ಕಾರ ಸುಮಾರು 400 ಭದ್ರತಾ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದೆ.
ಪಠಾಣ್ ಕೋಟ್ - ಡಾಲ್ ಹೌಸೀ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಅನುಮಾನಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಬಂದಿದೆ. ಹೀಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪಠಾಣ್ ಕೋಟ್ ಎಸ್ಎಸ್ ಪಿ ರಾಕೇಶ್ ಕೌಶಾಲ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಸೇನೆಗೂ ಎಚ್ಚರಿಕೆ ನೀಡಲಾಗಿದ್ದು, ಪಂಜಾಬ್ ಪೊಲೀಸರು ಹಾಗೂ ಬಿಎಸ್ಎಫ್ ಯೋಧರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics