ಢಾಕಾ: ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸೀಮಿತ ದಾಳಿಗೆ ಬೆಂಬಲ ನೀಡಿರುವ ಬಾಂಗ್ಲಾದೇಶ, ತನ್ನ ಸಾರ್ವಭೌಮತ್ವ ಹಾಗೂ ಪ್ರದೇಶದ ಮೇಲೆ ದಾಳಿ ನಡೆದರೆ ಅದಕ್ಕೆ ಪ್ರತಿಯಾಗಿ ದಾಳಿ ನಡೆಸುವ ಹಕ್ಕು ಭಾರತಕ್ಕೆ ಇದೆ ಎಂದು ಗುರುವಾರ ಹೇಳಿದೆ.
ತನ್ನ ಸಾರ್ವಭೌಮತ್ವ ಮತ್ತು ಮಣ್ಣಿನ ಮೇಲೆ ನಡೆಯುವ ಯಾವುದೇ ದಾಳಿಗೂ ಪ್ರತ್ಯುತ್ತರ ನೀಡುವ ಕಾನೂನಾತ್ಮಕ ಹಾಗೂ ಜಾಗತಿಕವಾಗಿ ಒಪ್ಪಿಕೊಂಡಿರುವ ಹಕ್ಕು ಭಾರತಕ್ಕೆ ಇದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸಿನಾ ಅವರ ಸಲಹೆಗಾರ ಇಖ್ಬಾಲ್ ಚೌಧರಿ ಅವರು ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಚೌಧರಿ ಅವರು, ಎರಡೂ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದ್ದು ಎಂದಿದ್ದಾರೆ.
ಭಾರತೀಯ ಸೇನೆ ನಿನ್ನೆ ತಡ ರಾತ್ರಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಶಿಬಿರಗಳ ಮೇಲೆ ಸೀಮಿತ ದಾಳಿ ನಡೆಸಿದ್ದು, ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics