ಜಮ್ಮು: ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಒಂದು ದಿನ ನಂತರ ಪಾಕಿಸ್ತಾನ ಸೇನಾ ಪಡೆ ಶುಕ್ರವಾರ ಜಮ್ಮು-ಕಾಶ್ಮೀರದ ಅಕ್ನೂರು ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿದೆ.
ಈ ತಿಂಗಳಲ್ಲಿ ಪಾಕಿಸ್ತಾನದ್ದು ಇದು 5ನೇ ಸಲ ಕದನ ವಿರಾಮ ಉಲ್ಲಂಘನೆಯಾಗಿದ್ದು ಕಳೆದ 36 ಗಂಟೆಗಳಲ್ಲಿ ಮೂರನೇ ಬಾರಿಯಾಗಿದೆ.
ಕಳೆದ ಮಧ್ಯ ರಾತ್ರಿ ಜಮ್ಮು ಜಿಲ್ಲೆಯ ಪಲ್ಲನ್ವಾಲಾಸ ಚಪ್ರಿಯಾಲ್ ಮತ್ತು ಸಮ್ನಮ್ ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆಯಿಂದ ಸಣ್ಣ ಮಟ್ಟಿನ ಶಸ್ತಾಸ್ತ್ರ ದಾಳಿ ನಡೆಯಿತು ಎಂದು ಜಮ್ಮುವಿನ ಉಪ ಆಯುಕ್ತ ಸಿಮ್ರಂದೀಪ್ ಸಿಂಗ್ ತಿಳಿಸಿದ್ದಾರೆ.
ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟವಾಗಿಲ್ಲ. ಪರಿಸ್ಥಿತಿ ಸಹಜವಾಗಿದೆ ಎಂದು ತಿಳಿಸಿದ್ದಾರೆ.