ಮೊಹಮ್ಮದ್ ಶಹಾಬುದ್ದೀನ್ (ಸಂಗ್ರಹ ಚಿತ್ರ)
ನವದೆಹಲಿ: ವಿವಾದಿತ ಆರ್ ಜೆಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಅಲ್ಲದೆ ಈ ಕೂಡಲೇ ಶರಣಾಗುವಂತೆ, ಆತನನ್ನು ತಕ್ಷಣದಿಂದಲೇ ಬಂಧಿಸಲು ಕ್ರಮ ತೆಗೆದುಕೊಳ್ಳುವಂತೆ ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಆದೇಶ ನೀಡಿದೆ.
ಸಿವಾನ್ ಮೂಲದ ಚಂದ್ರಕೇಶ್ವರ ಪ್ರಸಾದ್ ಅವರ ಕಿರಿಯ ಪುತ್ರರ ಒಬ್ಬನೇ ಒಬ್ಬ ಸಾಕ್ಷಿದಾರ ಮತ್ತು ಹಿರಿಯ ಪುತ್ರ ರಾಜೀವ್ ರೋಷನ್ ಹತ್ಯೆಗೆ ಸಂಬಂಧಪಟ್ಟಂತೆ ಪಾಟ್ನಾ ಹೈಕೋರ್ಟ್ ಶಹಾಬುದ್ದೀನ್ ಗೆ ಇತ್ತೀಚೆಗೆ ಜಾಮೀನು ನೀಡಿತ್ತು. ಆರ್ ಜೆಡಿ ನಾಯಕ ಶಹಾಬುದ್ದೀನ್ ಈಗಾಗಲೇ ಅವಳಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿದ್ದಾನೆ. ರೋಷನ್ ಹತ್ಯೆ ಪ್ರಕರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.
ಶಹಾಬುದ್ದೀನ್ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿರುವ ರಾಜೀವ್ ರೋಷನ್ ಹತ್ಯೆ ಪ್ರಕರಣವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಇದೇ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯ ಹೇಳಿದೆ.
ಪಾಟ್ನಾ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ರೋಷನ್ ಕುಟುಂಬ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು. ಬಿಹಾರ ಸರ್ಕಾರ ಕೂಡ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು.