ಇಶಾಂತ್ ಶರ್ಮಾ 
ದೇಶ

ಹರಾಜಿನಲ್ಲಿ ಬಿಕರಿಯಾಗದ ಇಶಾಂತ್ ಶರ್ಮಾ ಪಂಜಾಬ್ ಇಲೆವನ್ ಪರ ಆಡಲಿದ್ದಾರೆ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜಿನಲ್ಲಿ ಬಿಕರಿಯಾಗದ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಇದೀಗ ಕಿಂಗ್ಸ್ ಇಲೆವನ್...

ಇಂದೋರ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜಿನಲ್ಲಿ ಬಿಕರಿಯಾಗದ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದಾರೆ. 
ಪಂಜಾಬ್ ತಂಡದ ಕಾರ್ಯಾಚರಣೆಯ ಮುಖ್ಯಸ್ಥ ವೀರೇಂದ್ರ ಸೆಹ್ವಾಗ್ ಅವರು ಇದನ್ನು ಸ್ಪಷ್ಟಪಡಿಸಿದ್ದು, ಇಶಾಂತ್ ಶರ್ಮಾ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದರು. 
ಪಂದ್ಯದಲ್ಲಿ ಬೌಲಿಂಗ್ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸೆಹ್ವಾಗ್ ಬಹಿರಂಗಪಡಿಸಿದ್ದು. ಇನ್ನು ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಲು ಬೌಲರ್ ಗಳ ಪಾತ್ರ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ. 
ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಹಾರಾಜು ಪ್ರಕ್ರಿಯೆಯಲ್ಲಿ 2 ಕೋಟಿ ಮೊತ್ತಕ್ಕೆ ಹಾರಾಜಿಗಿದ್ದ ಇಶಾಂತ್ ರನ್ನು ಯಾವುದೇ ಫ್ರಾಂಚೈಸಿ ತಂಡಗಳು ಖರೀದಿಸಿರಲಿಲ್ಲ. ಇದೀಗ ಐಪಿಎಲ್ ನಲ್ಲಿ ಐದನೇ ಫ್ರಾಂಚೈಸಿಯೊಂದಿಗೆ ಇಶಾಂತ್ ಆಡಲಿದ್ದಾರೆ. ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್, ಡೆಕ್ಕನ್ ಚಾರ್ಜಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರೈಸಿಂಗ್ ಪುಣೆ ಸೂಪರ್ ಗೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ