ದೇಶ

"ಬೀಫ್ ಬ್ಯಾನ್ ಗೆ ಆಗ್ರಹಿಸಿದ್ದ ಅಜ್ಮೀರ್ ದರ್ಗಾದ ಮೌಲ್ವಿಯ ಉಚ್ಛಾಟನೆ, ಮುಸ್ಲಿಮೇತರ ಎಂದು ಘೋಷಣೆ"

Srinivas Rao BV
ಅಜ್ಮೀರ್: ಗೋಮಾಂಸವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದ ಅಜ್ಮೀರ್ ದರ್ಗಾದ ಮುಖಂಡ ಸಯೀದ್ ಜೈನುಲ್ ಅಬೆದಿನ್ ವಿರುದ್ಧ ಸ್ವಸಮುದಾಯವೇ ತಿರುಗಿಬಿದ್ದಿದ್ದು, ದರ್ಗಾದ ಮುಖ್ಯಸ್ಥ ಸ್ಥಾನದಿಂದ ಸಯೀದ್ ಜೈನುಲ್ ನ್ನು ಅವರ ಸಹೋದರ ಉಚ್ಛಾಟಿಸಿದ್ದಾರೆ. 
ದೇಶದಲ್ಲಿ ಕೋಮು ಸೌಹಾರ್ದತೆ ಬಲಗೊಳ್ಳುವುದಕ್ಕೆ ಗೋಹತ್ಯೆ ಸೇರಿದಂತೆ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಬೇಕೆಂದು ಸಯೀದ್ ಜೈನುಲ್ ಅಬೆದಿನ್ ಆಗ್ರಹಿಸಿದ್ದರು. ಆದರೆ ಇದಕ್ಕೆ ಜೈನುಲ್ ಅಬೆದಿನ ಸಹೋದರ ವಿರೋಧ ವ್ಯಕ್ತಪಡಿಸಿದ್ದು, ಧಾರ್ಮಿಕ ಮುಖಂಡನ ಸ್ಥಾನದಿಂದ ವಜಾಗೊಳಿಸಿರುವುದೂ ಅಲ್ಲದೇ ಮುಸ್ಲಿಮೇತರ ಎಂದು ಘೋಷಣೆ ಮಾಡಿದ್ದಾರೆ. 
ವಜಾಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೈನುಲ್ ಅಬೆದಿನ್ ಅವರ ಸಹೋದದರ ಸಯೀದ್ ಅಲ್ಲಾವುದ್ದೀನ್ ಅಲ್ಮಿ ಸಹೋದರನನ್ನು ವಜಾಗೊಳಿಸುವುದಕ್ಕೆ ಹಾಗೂ ತಾವು ನೂತನ ಮುಖ್ಯಸ್ಥರಾಗುವುದಕ್ಕೆ ಕುಟುಂಬದ ಬೆಂಬಲ ಇದೆ ಎಂದು ಹೇಳಿದ್ದಾರೆ. 
ಅಲ್ಲಾವುದ್ದೀನ್ ತಮ್ಮನ್ನು ತಾವು ದರ್ಗಾದ ಮುಖ್ಯಸ್ಥನೆಂದು ಘೋಷಿಸಿಕೊಂಡಿದ್ದಾರೆ ಆದರೆ ದರ್ಗಾ ಸಮಿತಿಯಿಂದ ಅಲ್ಲಾವುದ್ದೀನ್ ಅವರ ಸ್ವಯಂ ಘೋಷಿತ ನೇಮಕವನ್ನು ಈ ವರೆಗೂ ಮಾನ್ಯ ಮಾಡಲಗಿಲ್ಲ. 
SCROLL FOR NEXT