ದೇಶ

ರೈತರ ಸಾಲಮನ್ನಾಗೆ ಆರ್ ಬಿಐ ಆಕ್ಷೇಪ: ಕೆಟ್ಟ ಐಡಿಯಾ ಎಂದ ಊರ್ಜಿತ್ ಪಟೇಲ್

Shilpa D
ಮುಂಬಯಿ: ಸರ್ಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲ ಮನ್ನಾ ನಿರ್ಧಾರಕ್ಕೆ  ಆಕ್ಷೇಪ ವ್ಯಕ್ತ ಪಡಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಇದೊಂದು ಕೆಟ್ಟ ಯೋಜನೆ ಎಂದು ಹೇಳಿದೆ. 
ಸರ್ಕಾರಗಳು ರೈತರ ಸಾಲಮನ್ನಾ ಮಾಡುವುದರಿಂದ ರಾಷ್ಟ್ರೀಯ ಆಯವ್ಯಯದಲ್ಲಿ ವ್ಯತ್ಯಾಸವಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಊರ್ಜಿತ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೈತರ 36 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಇದನ್ನೇ ಅನುಸರಿಸಲು ಮುಂದಾಗಿವೆ. 
ಸಾಲ ಮನ್ನಾ ನಿರ್ಧಾರಗಳು ಹಣದುಬ್ಬರಕ್ಕೂ ಕಾರಣವಾಗುವುದರ ಜತೆಗೆ ಪ್ರಾಮಾಣಿಕ ಸಾಲ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತವೆ. ಮರುಪಾವತಿಸುವ ಶಿಸ್ತಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮನ್ನಾ ಮಾಡುವವರು ನೈತಿಕ ಅಶಿಸ್ತಿಗೂ ಕಾರಣರಾಗುತ್ತಾರೆ ಎಂದು ಹೇಳಿದ್ದಾರೆ.
ಕೃಷಿ ಸಾಲ ಮನ್ನಾ ನಿರ್ಧಾರಗಳು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತವೆ. ಇದರಿಂದ    ಇತರರು ಪಡೆಯುವ ಸಾಲಗಳೂ ದುಬಾರಿಯಾಗಲಿವೆ ಎಂದು ಹೇಳಿದ್ದಾರೆ.
SCROLL FOR NEXT