ಮುಂಬಯಿ: ಮುಂಬಯಿ ಕಾಲ್ ಸೆಂಟರ್ ಹಗರಣದ ಪ್ರಮುಖ ಮಾಸ್ಟರ್ ಮೈಂಡ್ ಸಾಗರ್ ಥಕ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಾವಿರಾರು ಅಮೆರಿಕರನ್ನು ಗುರಿಯಾಗಿಸಿಕೊಂಡಿದ್ದ ಈ ಪ್ರಕರಣದ ಪ್ರಮುಖ ಆರೋಪಿ ಸಾಗರ್ ಥಕ್ಕರ್ ಅಲಿಯಾಸ್ ಶ್ಯಾಗಿಯನ್ನು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ಮುಕುಂದ್ ಹೊಟಾಟೆ ತಿಳಿಸಿದ್ದಾರೆ. ಆದರೆ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಭಾರತದ ಟೆಲಿಕಾಲರ್ ಗಳ ಮೂಲಕ ತಾವು ಅಮೆರಿಕದ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಅಮೆರಿಕದ ಪ್ರಜೆಗಳಿಗೆ ಮಿಲಿಯಾಂತರ ಡಾಲರ್ ಪಂಗನಾಮ ಹಾಕಿದ್ದಾರೆ.