ಶ್ರೀನಗರ: ಶ್ರೀನಗರ ಲೋಕಸಭಾ ಕ್ಷೇತ್ರ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 8 ರಾಜ್ಯಗಳ 10 ಕಡೆ ಉಪ ಚುನಾವಣಾ ಸಮರ ಭಾನುವಾರ ಆರಂಭವಾಗಿದೆ.
ರಾಜ್ಯದ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆಯ ವಿಧಾನಸಭಾ ಕ್ಷೇತ್ರ ಹಾಗೂ ದೆಹಲಿಯ ರಜೌರಿ ಗಾರ್ಡನ್, ಜಾರ್ಖಂಡ್ ನ ಲಿತಿಪರ್, ರಾಜಸ್ತಾನ ಧೋಲ್ಪುರ್, ಪಶ್ಚಿಮ ಬಂಗಾಳದ ಕಂತಿ ದಕ್ಷಿಣ್, ಮಧ್ಯಪ್ರದೇಶದ ಅತೆರ್ ಮತ್ತು ಬಂಧವ್ ಘರ್, ಹಿಮಾಚಲ ಪ್ರದೇಶದ ಬೋರಂಜ್ ಮತ್ತು ಅಸ್ಸಾಂ ರಾಜ್ಯದ ಧೇಮೈ ವಿಧಾನಸಭಾ ಕೇತ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೂ ಇಂದೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಶ್ರೀನಗರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಏ.15ರಂದು ನಡೆಯಲಿದ್ದು, 10 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಏ.13 ರಂದು ನಡೆಯಲಿದೆ.