ಸಾಂದರ್ಭಿಕ ಚಿತ್ರ 
ದೇಶ

ಪ್ರಯಾಣಿಕರಿಗೆ ಥಳಿಸಿ ಪಾಟ್ನಾ-ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಡಕಾಯಿತಿ

ಪಾಟ್ನಾ-ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದರೋಡೆಕೋರರು ಪ್ರಯಾಣಿಕರನ್ನು ಥಳಿಸಿ, ಅವರ ಬಳಿಯಿದ್ದ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗಿರುವ

ಬುಕ್ಸಾರ್: ಪಾಟ್ನಾ-ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದರೋಡೆಕೋರರು ಪ್ರಯಾಣಿಕರನ್ನು ಥಳಿಸಿ, ಅವರ ಬಳಿಯಿದ್ದ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬಿಹಾರದ ಬಕ್ಸಾರ್‌ ಬಳಿ ನಡೆದಿದೆ.
ರೈಲಿನಲ್ಲಿದ್ದ ಪ್ರಯಾಣಿಕರ ಬಳಿ ಇದ್ದ ಮೌಲ್ಯಯುತ ವಸ್ತುಗಳನ್ನು ಕದ್ದಿದ್ದಲ್ಲದೇ ಸ್ಥಳದಿಂದ ಪರಾರಿಯಾಗುವ ಮುನ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ.  ಡಕಾಯಿತರ ಹಲ್ಲೆಯಿಂದ ಮೂವರು ಪ್ರಯಾಣಿಕರು ಗಾಯಗೊಂಡಿದ್ದು, ದೂರು ದಾಖಲಿಸಿದ್ದಾರೆ. 
ಘಟನೆ ಸಂಬಂಧ  ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯದ ವೇಳೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈಲು ಬೆಂಗಾವಲು ಪಡೆಯ ಆರ್‌ಪಿಎಫ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. 
ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯ ಸಿಗುತ್ತೆ ಅನ್ನೋ ನಂಬಿಕೇನೆ ಇಲ್ಲ.. ಸತ್ಯಾಗ್ರಹ ಕೂರ್ತೀನಿ': ನ್ಯಾಯಮೂರ್ತಿಗಳ ವಿರುದ್ಧವೇ Arvind Kejriwal ರಣಕಹಳೆ!

ಬ್ರಾಹ್ಮಣ ಸಮುದಾಯ ಸಿಡಿದೇಳುವ ಭೀತಿ: ರಾಜನಾಥ್ ಸಿಂಗ್ ದೇಶದ ಮುಂದಿನ ರಾಷ್ಟ್ರಪತಿ?

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು

IPL 2026: LSG vs KKR ಸ್ಫೋಟಕ ಆಟ.. ಇತಿಹಾಸ ಬರೆದ Rinku Singh, 15 ವರ್ಷಗಳ ಹಳೆಯ MS Dhoni ದಾಖಲೆ ಧೂಳಿಪಟ

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

SCROLL FOR NEXT