ನವದೆಹಲಿ: ಕಳೆದ ಕೆಲತಿಂಗಳುಗಳಿಂದ ಬಿಜೆಪಿ ಮತ್ತು ಪ್ರಧಾನಮಂತ್ರಿಗಳ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನರೇಂದ್ರ ಮೋದಿ ನಮಗೆ ಹಿರಿಯ ಅಣ್ಣನಂತೆ ಎಂದು ಹೇಳುವ ಮೂಲಕ ಬಿಜೆಪಿ-ಶಿವಸೇನೆ ಮೈತ್ರಿಗೆ ತೇಪೆ ಹಚ್ಚಿದ್ದಾರೆ.
ಮಂಗಳವಾರ ಸಂಜೆ ನಡೆದ ಎನ್ ಡಿ ಎ ಮೈತ್ರಿ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಉದ್ಧವ್ ಠಾಕ್ರೆ, ಪ್ರತ್ಯೇಕವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಮೋದಿ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಉದ್ಧವ್ ಠಾಕ್ರೆ ನರೇಂದ್ರ ಮೋದಿ ಹಿರಿಯ ಅಣ್ಣನಿದ್ದಂತೆ ಎಂದು ಹೇಳಿದ್ದಾರೆ.
ತಮ್ಮ ದೀರ್ಘಕಾಲದ ಮೈತ್ರಿಯನ್ನು ಸ್ಮರಿಸಿದ ಠಾಕ್ರೆ ಅಮಿತ್ ಶಾ ಸೀನಿಯರ್ ಪಾರ್ಟನರ್, ಅವರ ಮೇಲೆ ಬಹು ದೊಡ್ಡ ಜವಾಬ್ದಾರಿಯಿದೆ, ಇಬ್ಬರ ನಡುವೆ ಸಮನ್ವಯ ಬೆಳೆಸುವ ಹೊಣೆಗಾರಿಕೆ ಅವರದ್ದು ಎಂದು ತಿಳಿಸಿದ್ದಾರೆ.