ಶ್ರೀನಗರ: ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಮರು ಚುನಾವಣೆಯಲ್ಲಿ ಈ ವರೆಗೂ ಶೇ.1 ರಷ್ಟು ಮಾತ್ರ ಮತದಾನ ನಡೆದಿದ್ದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
38 ಮತಗಟ್ಟೆಗಳಲ್ಲಿ ಕಳೆದ ಮೂರು ಗಂಟೆಗಳಿಂದಲೂ ಸಹ ಕೇವಲ ಶೇ.1 ರಷ್ಟು ಮತದಾನ ನಡೆದಿದ್ದು, ಬೆಳಿಗ್ಗೆ 10 ಗಂಟೆ ವರೆಗೆ 34,169 ಮತದಾರರ ಪೈಕಿ ಕೇವಲ 344 ಮತದಾರರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬುಡ್ಗಾಂ ಹಾಗೂ ಖಾನ್ಸಾಹಿಬ್ ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 2 ಮತಗಳು ಚಲಾವಣೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ತೀವ್ರ ಹಿಂಸಾಚಾರವನ್ನು ಕಂಡಿದ್ದ ಚಾದೂರಾದಲ್ಲಿ 200 ಮತಗಳು ಚಲಾವಣೆಯಾಗಿದ್ದು, ಬೀರ್ವಾ ಕ್ಷೇತ್ರದಲ್ಲಿ 142 ಮತಗಳು ಚಲಾವಣೆಯಾಗಿದೆ.