ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಲು ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶ

ಎರಡು ವರ್ಷಗಳ ಹಿಂದೆ ರೈಲು ಹತ್ತುವಾಗ ಕಾಲು ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ....

ಸಾಂದರ್ಭಿಕ ಚಿತ್ರ
Shilpa D
Updated On : 15 Apr 2017, 7:06 am
ಮುಂಬಯಿ: ಎರಡು ವರ್ಷಗಳ ಹಿಂದೆ ರೈಲಿನಿಂದ ಇಳಿಯುವಾಗ  ಕಳೆದುಕೊಂಡ ಮಹಿಳೆಗೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಖಂಡಲಾ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಮಹಿಳೆಯೊಬ್ಬರು ಜಾರಿ ಬಿದ್ದು ಎರಡು ಕಾಲುಗಳನ್ನು ಕಳೆದು ಕೊಂಡಿದ್ದರು. 
ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಭಯ್ ಓಕಾ ಮತ್ತು ಅನಿಲ್ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪರಿಹಾರ ನೀಡುವಂತೆ ಆದೇಶಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

Advertisement

Advertisement

ತಾಂತ್ರಿಕ ಸಮಸ್ಯೆಯ ಬಗ್ಗೆ ತಿಳಿಸಿರುವ ರೈಲ್ವೆ, ಪರಿಹಾರಕ್ಕಾಗಿ ಮಹಿಳೆಯು ರೈಲ್ವೆ ಪರಿಹಾರ ಮಂಡಳಿಗೆ ಅಪೀಲು ಹೋಗಲು ಅವಕಾಶ ಇದೆ ಎಂದು ತಿಳಿಸಿದೆ.
ಫೆಬ್ರವರಿ 9 2015 ರಂದು ನಾನು ಪ್ರಯಾಣಿಸುತ್ತಿದ್ದ ಬೋಗಿಗೆ ನುಗ್ಗಿದ ಕಳ್ಳರು ನನ್ನ ಬಳಿಯಿದ್ದ ಪರ್ಸ್ ಕಸಿಯಲು ಯತ್ನಿಸಿದರು. ಈ ವೇಳೆ ನಾನು ಅವರಿಂದ ತಪ್ಪಿಸಿಕೊಳ್ಳಲು ಓಡಲು ಯತ್ನಿಸಿದೆ. ಈ ವೇಳೆ ಆಕೆ ಪ್ರಯಾಣಿಸುತ್ತಿದ್ದ ಸಿಕಂದರಾಬಾದ್ - ರಾಜ್ ಕೋಟ್ ಎಕ್ಸ್ ಪ್ರೆಸ್ ರೈಲು ಖಂಡಲಾ ಸ್ಟೇಷನ್ ನಲ್ಲಿ ಸ್ವಲ್ಪ ಕಾಲ ತಂಗಿತ್ತು, ಮಹಿಳೆ ಶೇಜಲ್ ಲಡೋಲಾ ಕಳ್ಳರಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಇಳಿಯುವಾಗ ರೈಲು ಚಲಿಸಲು ಆರಂಭಿಸಿತು. ಈ ವೇಳೆ ನಡೆದ ದುರಂತದಲ್ಲಿ ಆಕೆ ಕಾಲುಗಳನ್ನು ಕಳೆದುಕೊಂಡರು.
ತನ್ನ ಚಿಕಿತ್ಸಾ ವೆಚ್ಚಕ್ಕಾಗಿ ಪರಿಹಾರ ಮತ್ತು ರಾತ್ರಿ ಹೊತ್ತು ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರಿಗೆ ರಕ್ಷಣೆ ನೀಡಬೇಕೆಂದು  ಮಹಿಳೆ ಮನವಿ ಸಲ್ಲಿಸಿದ್ದರು, ಪ್ರಯಾಣಿಕರಿಗೆ ರಕ್ಷಣೆ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂಬುದನ್ನು ಕೋರ್ಟ್ ಗಮನಿಸಿತ್ತು. ಹೀಗಾಗಿ ಆಕೆಗೆ ಪರಿಹಾರ ನೀಡುವಂತೆ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement