ಬಿಲಾಸ್ಪುರ: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿದ್ದಾರೆಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಮಾಹಿತಿ ಆಧಾರತ ಮೇರೆಗೆ ಛತ್ತೀಸ್"ಗಢದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇರೆಗೆ ಅಧಿಕಾರಿಗಳು, ಶಂಕಿತ ಉಗ್ರರು ಫೋನಿನಲ್ಲಿ ನಡೆಸುತ್ತಿದ್ದ ಸಂಭಾಷಣೆಯನ್ನು ಕದ್ದಾಲಿಕೆ ನಡೆಸಿದ್ದರು. ಈ ವೇಳೆ ಇಬ್ಬರೂ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂಬುದು ಖಚಿತವಾದ ಹಿನ್ನಲೆಯಲ್ಲಿ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ ಜಮ್ಮು ಮತ್ತು ಮಧ್ಯಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಸತ್ವಿಂದರ್ ಸಿಂಗ್, ರಜ್ಜನ್ ತಿವಾರಿ ಹಾಗೂ ಬಲ್'ರಾಮ್ ಎಂಬ ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಬಂಧನಕ್ಕೊಳಗಾಗಿರುವ ಇಬ್ಬರು ಶಂಕಿತರು ಸತ್ವಿಂದರ್, ರಜ್ಜನ್, ಹಾಗೂ ಬಲ್'ರಾಮ್ ಜೊತೆಗೆ ನಂಟು ಹೊಂದಿದ್ದರೆಂಬುದು ಇದೀಗ ಬಹಿರಂಗವಾಗಿದೆ.
ಮಣಿಂದರ್ ಯಾದವ್ ಮತ್ತು ಸಂಜಯ್ ದೇವ್ಗನ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಇಬ್ಬರೂ ಶಂಕಿತರು ಹಲವು ಬ್ಯಾಂಕ್ ಗಳಲ್ಲಿ ವಿವಿಧ ರೀತಿಯಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಒಂದು ಖಾತೆಯಿಂದ ಹಣವನ್ನು ತೆಗೆದು ಮತ್ತೊಂದು ಖಾತೆಗೆ ವರ್ಗಾವಣೆಮಾಡುತ್ತಿದ್ದರು. ಈ ಬಗ್ಗೆ ನಮಗೆ ಮಾಹಿತಿ ತಿಳಿಯುತ್ತಿದ್ದಂತೆ ಶಂಕಿತರ ಮೇಲೆ ಕಣ್ಗಾವಲಿರಿಸಲಾಗಿತ್ತು. ವಿಚಾರಣೆ ವೇಳೆ ಮಣಿಂದರ್ ರಜ್ಜನ್ ತಿವಾರಿ ಜೊತೆಗೆ ಸಂಪರ್ಕದಲ್ಲಿದ್ದನೆಂಬುದುನ್ನು ಒಪ್ಪಿಕೊಂಡಿದ್ದಾರೆ. ತಿವಾರಿ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದನೆಂದು ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.