ಪಲ್ಫಾರ್: ಬಡ್ತಿ ನೀಡಲು 12 ಲಕ್ಷ ರುಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಾರಾಷ್ಟ್ರದ ಐಎಎಸ್ ಅಧಿಕಾರಿ ಹಾಗೂ ಡೆಪ್ಯೂಟಿ ಕಮಿಷನರ್ ಕೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಆದಿವಾಸಿ ಜನಾಂಗದ ಮಕ್ಕಳಿಗಾಗಿ ಆಶ್ರಮ ಶಾಲೆಗಳನ್ನು ನಡೆಸುತ್ತಿದ್ದು ಇದರಲ್ಲಿ ಕೆಲಸ ಮಾಡುವ 12 ನೌಕರರು ಸೂಪರಿಂಟೆಂಡ್ ಆಗಿ ಬಡ್ತಿ ಪಡೆದಿದ್ದರು. ಆದರೆ ಪ್ರತಿಯೊಬ್ಬ ನೌಕರನಿಂದ 1 ಲಕ್ಷ ರುಪಾಯಿ ಲಂಚಕ್ಕೆ ಆದಿವಾಸಿ ಇಲಾಖೆಯ ಹೆಚ್ಚುವರಿ ಆಯುಕ್ತ ಐಎಎಸ್ ಅಧಿಕಾರಿ ಮಿಲಿಂಡ್ ಬಿ ಗಾವಾಡೆ(54) ಮತ್ತು ಡೆಪ್ಯೂಟಿ ಕಮಿಷನರ್ ಕಿರಣ್ ಸುಖ್ ಲಾಲ್ ಮಾಲಿ(39) ಬೇಡಿಕೆ ಇಟ್ಟಿದ್ದರು.
ಒಂದು ವೇಳೆ ಲಂಚ ನೀಡದಿದ್ದರೆ ಮರಳಿ ಹಿಂಬಡ್ತಿ ಮಾಡುವುದಾಗಿ 12 ನೌಕರರಿಗೆ ಈ ಇಬ್ಬರು ಅಧಿಕಾರಿಗಳು ಬೆದರಿಕೆ ಹಾಕಿದ್ದರು. ಅಂತೆಯೇ ಕಿರಣ್ ನೌಕರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದವರು ದಾಳಿ ಮಾಡಿದರು. ಈ ವೇಳೆ ಕಿರಣ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದರು.