ದೇಶ

ರಾಜ್ಯ ರಾಣಿ ಎಕ್ಸ್'ರೈಲು ಅಪಘಾತ: ರೈಲ್ವೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು

Manjula VN
ರಾಮ್'ಪುರ: ಮೀರುತ್-ಲಖನೌ ರಾಜ್ಯ ರಾಣಿ ಎಕ್ಸ್'ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಸರ್ಕಾರಿ ಪೊಲೀಸರು (ಜಿಪಿಆರ್) ರೈಲ್ವೇ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ. 
ಉತ್ತರಪ್ರದೇಶದ ರಾಮ್'ಪುರದಲ್ಲಿ ನಿನ್ನೆಯಷ್ಟೇ ಮೀರುತ್-ಲಖನೌ ರಾಜ್ಯ ರಾಣಿ ಎಕ್ಸ್'ರೈಲು ಹಳಿತಪ್ಪಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿತ್ತು. 
ಪ್ರಕರಣ ಸಂಬಂಧ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ತನಿಖೆಗೆ ಆದೇಶಿಸಿದ್ದರು. ಆಲ್ಲದೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ರೂ.50 ಸಾವಿರ ಹಾಗೂ ಗಾಯಗೊಂಡವರಿಗೆ ರೂ.25 ಸಾವಿರ ಪರಿಹಾರವನ್ನು ಘೋಷಣೆ ಮಾಡಿದ್ದರು. 
ಇದೀಗ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ರೈಲ್ವೇ ಸರ್ಕಾರಿ ಪೊಲೀಸರು ರೈಲ್ವೇ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. 
SCROLL FOR NEXT