ದೇಶ

ಎರಡು ವಿವಾದಾತ್ಮಕ ನಿರ್ಧಾರಗಳಿಂದಾಗಿ ಯೋಗಿ ಆದಿತ್ಯನಾಥ್ ಹೆಚ್ಚು ಜನಪ್ರಿಯ: ಸಮೀಕ್ಷೆ

Shilpa D
ನವದೆಹಲಿ: ಕಳೆದ ತಿಂಗಳು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿಜೆಪಿಯ ಯೋಗಿ ಆದಿತ್ಯನಾಥ್ ತೆಗೆದು ಕೊಂಡ ಎರಡು ಮುಖ್ಯ ವಿವಾದಾತ್ಮಕ ನಿರ್ಧಾರಗಳಿಂದ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು ಎಂದು ಸಮೀಕ್ಷೆಯೊಂದು ತಿಳಿಸಿದೆ.
ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಿ ಮತ್ತು ಬೀದಿ ಕಾಮಣ್ಣರ ಆ್ಯಂಟಿ ರೊಮಿಯೊ) ನಿಗ್ರಹ ಪಡೆ ಸ್ಥಾಪಿಸಿದ್ದರಿಂದ  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರ ಪ್ರಸಿದ್ಧಿ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ವಲಯದಲ್ಲಿ ಈ ನಿರ್ಧಾರಗಳಿಗೆ ಪ್ರಶಂಸೆ ವ್ಯಕ್ತವಾಗಿದೆ ಎಂದು ಸಮೀಕ್ಷೆ ಹೇಳಿದೆ. ರಾಜ್ಯದ 20 ಜಿಲ್ಲೆಗಳಲ್ಲಿ 2,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಗಾಂವೊ ಕನೆಕ್ಷನ್‌ ಎನ್ನುವ ಗ್ರಾಮೀಣ ಮಾಧ್ಯಮ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ, ಅಕ್ರಮ ಕಸಾಯಿಖಾನೆಗಳ ವಿರುದ್ಧದ ಕ್ರಮಕ್ಕೆ ಶೇ 38.1, ಆ್ಯಂಟಿ ರೊಮಿಯೊ ನಿಗ್ರಹ ದಳಕ್ಕೆ ಶೇ 25.4 ಮತ ದೊರಕಿದೆ.
ಪೊಲೀಸರು ತಮ್ಮ ಅಧಿಕಾರ  ಮೀರಿ ವರ್ತಿಸುತ್ತಿದ್ದಾರೆ, ಆಯ್ಕೆಯ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎನ್ನವ ಆರೋಪಗಳ ನಡುವೆಯೂ ಬೀದಿ ಕಾಮಣ್ಣರ ನಿಗ್ರಹ ಪಡೆಯನ್ನು ಶೇ 37 ಮಹಿಳೆಯರು ಬೆಂಬಲಿಸಿದ್ದಾರೆ.
SCROLL FOR NEXT