ಅಲ್ಲಾಹಾಬಾದ್: ಅಲ್ಲಾಹಾಬಾದ್ ನಲ್ಲಿರುವ ಅಖಿಲೇಶ್ವರ ಮಹಾದೋ ದೇವಾಲಯದ ಆವರಣದಲ್ಲಿ ಯಾರೋ ಕಿಡಿಗೇಡಿಗಳು ಕರುವಿನ ತಲೆ ತಂದು ಬಿಸಾಕಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಾಲಯದ ಪೂಜಾರಿ ಅಖಿಲೇಶ್ ಪಾಂಡೆ ಎಂದಿನಂತೆ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದಾಗ. ಅಲ್ಲಿ ಕರುವಿನ ತಲೆ ನೋಡಿದ್ದಾರೆ. ಕೂಡಲೇ ವಿಷಯ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿದೆ.
ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ದೇವಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಶಾಲೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.