ವಾರಿಜಾ ಶ್ರಿಗೆ ಸಹಾಯ ಮಾಡಿದ ಆಟೋ ಚಾಲಕ ಬಾಬಾ 
ದೇಶ

ಹಣವಿಲ್ಲದ ಯುವತಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಆಟೋ ಚಾಲಕ

ಆಟೋ ಚಾಲಕರು ಎಂದಾಕ್ಷಣ ಮೂಗು ಮುರಿಯುವ ಅನೇಕ ಮಂದಿ ನಮ್ಮಲ್ಲಿದ್ದಾರೆ, ಕೆಟ್ಟ ಆಟೋ ಚಾಲಕರಿದ್ದಂತೆ ಒಳ್ಳೆಯವರು ಕೂಡ ಇನ್ನೂ ಈ ಭೂಮಿ ...

ಹೈದರಾಬಾದ್: ಆಟೋ ಚಾಲಕರು ಎಂದಾಕ್ಷಣ ಮೂಗು ಮುರಿಯುವ ಅನೇಕ ಮಂದಿ ನಮ್ಮಲ್ಲಿದ್ದಾರೆ, ಕೆಟ್ಟ ಆಟೋ ಚಾಲಕರಿದ್ದಂತೆ ಒಳ್ಳೆಯವರು ಕೂಡ ಇನ್ನೂ ಈ ಭೂಮಿ ಮೇಲಿದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ಹೈದರಾಬಾದ್  ಮೂಲದ ಯುವತಿಯೋರ್ವಳು ವೀಸಾ ಮಾಡಿಸಲು ಹೋದಾಗ ಹಣವಿಲ್ಲದೇ ಪರದಾಡುತ್ತಿದ್ದ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಆಟೋ ಚಾಲಕ, ಈ ಬಗ್ಗೆ ಯುವತಿ ಫೇಸ್ ಬುಕ್ ನಲ್ಲ ಪೋಸ್ಟ್ ಹಾಕಿದ್ದು, ಇದೀಗ ವೈರಲ್ ಆಗಿದೆ.
ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿ ವೀಸಾ ಸಂದರ್ಶನಕ್ಕಾಗಿ ಹೈದರಾಬಾದಿಗೆ ಬಂದಿದ್ದು, ಆಕೆ ರೂ.5000 ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ಆಕೆಯ ಬಳೆ ಕೇವಲ ರೂ.2000 ಮಾತ್ರ ಇತ್ತು. ಆದರೆ ಹತ್ತಿರದ ಏಟಿಎಮ್ ಗಳಲ್ಲಿ  ದುಡ್ಡು ಇರಲಿಲ್ಲ. ಆಟೋ ಹಿಡಿದು 10-15 ಏಟಿಎಮ್  ಸುತ್ತಾಡಿದರೂ ಪ್ರಯೋಜನವಾಗಲಿಲ್ಲ. ಅಂಗಡಿಯವರಿಗೆ ಕಾರ್ಡ್ ಸ್ವೈಪ್ ಮಾಡಿ ನಗದನ್ನು ಕೊಡುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಆಕೆಯ ಸಹಾಯಕ್ಕಾಗಿ ಬಂದವರು ಆಕೆಯ ಆಟೋ ಚಾಲಕ. ಹೆಣ್ಣು ಮಗಳು ಹಣಕ್ಕಾಗಿ ಪರದಾಡುತ್ತಿರುವ ಕಷ್ಟವನ್ನು ಅರ್ಥಮಾಡಿಕೊಂಡ ಆಟೋ ಚಾಲಕ ಬಾಬಾ ತಮ್ಮ ಬಳಿ ಜಮೆಯಾಗಿದ್ದ ರೂ.3000ವನ್ನು ಆಕೆಗೆ ಕೊಟ್ಟಿದ್ದಾರೆ.
ಮೇಡಂ, ನೀವಿದನ್ನು ಸದ್ಯಕ್ಕೆ ಇಟ್ಟುಕೊಳ್ಳಿ, ಸಂದರ್ಶನ ಮುಗಿದ ಬಳಿಕ ಹಿಂತಿರುಗಿಸಿ ಎಂದು ಹೇಳಿದ್ದಾರೆ.  ಆಟೋ ಚಾಲಕ ಅಪರಿಚಿತರೊಬ್ಬರಿಗೆ ಸಹಾಯ ಮಾಡಿರುವುದನ್ನು ಭಾವುಕಳಾಗಿ ಸ್ಮರಿಸಿಕೊಂಡಿದ್ದಾರೆ.  ಎಲ್ಲಾ ಧರ್ಮಗಳಿಗಿಂತ  ಮಾನವೀಯತೆಯೇ ದೊಡ್ಮಿಡದು  ಎಂದು ನೆನಪಿಸಿದ್ದಕ್ಕೆ ವಾರಿಜಶ್ರೀ ಬಾಬಾಗೆ ಧನ್ಯವಾದ ಅರ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!