ದೇಶ

ಮೇ1 ರಿಂದ ವಿಐಪಿ ವಾಹನಗಳ ಮೇಲಿನ ಕೆಂಪು ದೀಪ ಬಂದ್; ಕೇಂದ್ರ ಸಂಪುಟದ ಮಹತ್ವದ ನಿರ್ಧಾರ

Shilpa D
ನವದೆಹಲಿ: ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಗಣ್ಯರು, ಸಚಿವರು ಮತ್ತು ಶಾಸಕರು ಕಾರಿನ ಮೇಲೆ ಕೆಂಪು ದೀಪ ಹಾಕಿಕೊಳ್ಳುವುದನ್ನು ನಿಷೇಧಿಸಿದೆ. ಮೇ 1 ರಿಂದ ಯಾವುದೇ ವಿಐಪಿಗಳು ತಮ್ಮ ಕಾರಿನ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳದಂತೆ ಆದೇಶ ಹೊರಡಿಸಿದೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ಸ್ಪೀಕರ್ ಮಾತ್ರ ಕೆಂಪು ದೀಪ ಅಳವಡಿಸಿಕೊಳ್ಳಬಹುದಾಗಿದೆ.
ನಿಯಮದ ಪ್ರಕಾರ ಕ್ಯಾಬಿನೆಟ್ ದರ್ಜೆಯ 32 ಸಚಿವರಿಗೆ ಮತ್ತಿತರಿಗೆ ತಮ್ಮ ಕಾರುಗಳಲ್ಲಿ ಕೆಂಪು ದೀಪ ಹಾಕಿಕೊಳ್ಳಬಹುದಾಗಿತ್ತು, ಆದರೆ ಕೆಂಪು ದೀಪ ಹಾಕಿಸಿಕೊಳ್ಳುವ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.
ಕಳೆದ ವಾರ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸಭೆ ಕರೆದು ಈ ವಿಷಯವಾಗಿ ಸಭೆ ನಡೆಸಿತು. ರಸ್ತೆ ಸಾರಿಗೆ ಸಂಸ್ಥೆ ಮೂರು ಆಯ್ಕೆಗಳನ್ನಿಟ್ಟಿತ್ತು, ಇದಕ್ಕಾಗಿ ಪ್ರಧಾನ ಮಂತ್ರಿಗಳು ಹಿರಿಯ ನಾಯಕರು ಮತ್ತು ಸಂಪುಟ ಸಚಿವರೊಂದಿಗೆ ಸಭೆ ನಡೆಸಿ ಕೆಂಪು ದೀಪ ಬಳಸುವ ಸಂಸ್ಕತಿಗೆ ಅಂತ್ಯ ಹಾಡಿದೆ. ಈ ಪ್ರಸ್ತಾವನೆಯನ್ನು ಒಂದೂವರೆ ವರ್ಷದ ಹಿಂದೆಯೇ ಕಳುಹಿಸಲಾಗಿತ್ತಂತೆ. 
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಸಚಿವರು  ಕೆಂಪು ದೀಪದ ಕಾರು ಬಳಕೆಯನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿಐಪಿ ಸಂಸ್ಕೃತಿಯಿಂದ ದೂರ ಉಳಿಯುವಂತೆ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. 
SCROLL FOR NEXT