ಭಾರತೀಯ ರೈಲ್ವೆ 
ದೇಶ

ಬಿಜೆಪಿ ಅವಧಿಯಲ್ಲೇ ರೈಲ್ವೆ ಇಲಾಖೆಯ ಕಳಪೆ ಕಾರ್ಯನಿರ್ವಹಣೆ ಅನುಪಾತ: ಪಿ ಚಿದಂಬರಂ

ಭಾರತೀಯ ರೈಲ್ವೆ ಇಲಾಖೆಯ ಸಮಸ್ಯೆ ತುಂಬಾ ಆಳವಾಗಿ ಬೇರೂರಿದ್ದು, ಸರ್ಕಾರಿ ಸ್ವಾಮ್ಯದ ಇಲಾಖೆಯನ್ನಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಸಮಸ್ಯೆ ತುಂಬಾ ಆಳವಾಗಿ ಬೇರೂರಿದ್ದು, ಸರ್ಕಾರಿ ಸ್ವಾಮ್ಯದ ಇಲಾಖೆಯನ್ನಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ. 
ರೈಲ್ವೆ ಇಲಾಖೆ ಬಿಜೆಪಿ ಆಡಳಿತಾವಧಿಯಲ್ಲೇ ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ಗುಣಮಟ್ಟ ಹೊಂದಿದೆ. 2000-01 ಹಾಗೂ 2016-17 ಎರಡೂ ಅವಧಿಯಲ್ಲಿ ರೈಲ್ವೆ ಇಲಾಖೆ ಕಳಪೆ ಕಾರ್ಯನಿರ್ವಹಣೆಯ ಗುಣಮಟ್ಟ ಹೊಂದಿದ್ದು, ಎರಡೂ ಅವಧಿಯಲ್ಲಿ ಇದ್ದದ್ದು ಬಿಜೆಪಿ ಸರ್ಕಾರವೇ ಎಂದು ಚಿದಂಬರಂ ಆರೋಪಿಸಿದ್ದಾರೆ. 
ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ರೈಲ್ವೆ ಇಲಾಖೆಯ ಸಮಸ್ಯೆ ಆಳವಾದದ್ದು ಅದನ್ನು ಸರ್ಕಾರಿ ಇಲಾಖೆಯಂತೆ ನಡೆಸಲು ಸಾಧ್ಯವಿಲ್ಲ. ರೈಲ್ವೆ ಇಲಾಖೆ ಒಂದು ರೂಪಾಯಿ ಆದಾಯ ಗಳಿಸಬೇಕಾದರೆ ಎಷ್ಟು ಖರ್ಚು ಮಾಡಬೇಕೆಂಬುದನ್ನು ಕಾರ್ಯನಿರ್ವಹಣೆಯ ಅನುಪಾತ ತೋರಿಸುತ್ತದೆ. ಉದಾಹರಣೆಗೆ 100 ಪೈಸೆಗಳನ್ನು (ಒಂದು ರೂಪಾಯಿ) ಗಳಿಸಲು ರೈಲ್ವೆ ಇಲಾಖೆ 94.9 ಪೈಸೆಯನ್ನು ಖರ್ಚು ಮಾಡುತ್ತಿದೆ. ಕಾರ್ಯನಿರ್ವಹಣೆಯ ಅನುಪಾತ ಉಳಿದ ವರ್ಷಗಳಿಗೆ ಹೋಲಿಸಿದರೆ 2016-17 ರಲ್ಲಿ ಆತಂಕಕಾರಿಯಾಗಿದೆ ಎಂದು ಚಿದಂಬರಂ ಹೇಳಿದ್ದಾರೆ. 
ರೈಲ್ವೆ ಇಲಾಖೆ ಕಾರ್ಯನಿರ್ವಹಣೆ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ್ದ ರೈಲ್ವೆ ಇಲಾಖೆ ರಾಜ್ಯ ಸಚಿವ ರಾಜೆನ್ ಗೋಹೈನ್ ರೈಲ್ವೆ ಇಲಾಖೆಯ ಕಾರ್ಯನಿರ್ವಹಣೆಯ ಅನುಪಾತ ಶೇ.94.9 ರಷ್ಟಿದೆ ಎಂದಿದ್ದರು. ಇದೇ ಅನುಪಾತ 2000-01 ರಲ್ಲಿ ಶೇ.80 ರಷ್ಟಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!