ನವದೆಹಲಿ: ವಾಟ್ಸ್ ಮಾದರಿಯ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರ ಗೌಪ್ಯತೆಯನ್ನು ಕಾಪಾಡಲು ಕಾನೂನು ಚೌಕಟ್ಟನ್ನು ರೂಪಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠದ ಎದುರು ಕೇಂದ್ರ ಸರ್ಕಾರದ ಪರವಾಗಿ ಹೇಳಿಕೆ ನೀಡಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಸಾಮಾಜಿಕ ಜಾಲತಾಣ ಬಳಕೆದಾರರ ಡಾಟಾ ಗೌಪ್ಯತೆಗಾಗಿ ಟ್ರಾಯ್ ಕೆಲಸ ಮಾಡುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ಜಾರಿಗೆ ಬರಲಿದೆ ಎಂದಿದ್ದಾರೆ.
ಗ್ರಾಹಕರ ಡಾಟಾ ಗೌಪ್ಯತೆಯನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೆಲವು ವಾರಗಳ ಕಾಲ ಮುಂದೂಡಬೇಕು, ಆ ನಂತರ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯವಿದೆ ಎಂದು ಕೋರ್ಟ್ ಗೆ ಮುಕುಲ್ ರೋಹಟ್ಗಿ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಪ್ರಕರಣವನ್ನು ಏ.27 ಕ್ಕೆ ಮುಂದೂಡಿದೆ.
ಫೇಸ್ ಬುಕ್-ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಖಾಸಗಿ ಸಂವಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು ಭಾರತದ 157 ಮಿಲಿಯನ್ ಗ್ರಾಹಕರ ಗೌಪ್ಯತೆಗೆ ಧಕ್ಕೆ ಉಂಟುಮಾಡಿವೆ ಎಂಬ ದೂರಿನ ಅರ್ಜಿಯ ವಿಚಾರಣೆಯನ್ನು ಜ.16 ರಂದು ನಡೆಸಿದ್ದ ಸುಪ್ರೀಂ ಕೋರ್ಟ್ ಟ್ರಾಯ್ ಹಾಗೂ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics