ದೇಶ

ಜುಲೈ 31 ರೊಳಗೆ ಆನ್ ಲೈನ್ ನಲ್ಲಿ ಮಕ್ಕಳ ಪೋರ್ನ್ ತಡೆಗೆ ಕೇಂದ್ರದ ಡೆಡ್ ಲೈನ್

Sumana Upadhyaya

ನವದೆಹಲಿ: ಮಕ್ಕಳಿಗೆ ಅಶ್ಲೀಲತೆ ಮತ್ತು ಲೈಂಗಿಕ ಕಿರುಕುಳದ ವಿಷಯಗಳನ್ನು ಪ್ರಚೋದಿಸುವ ವಿಷಯಗಳನ್ನು ಜುಲೈ 31ರೊಳಗೆ ಹಂಚಿಕೆ ಮತ್ತು ಪ್ರಸರಣ ಮಾಡುವುದನ್ನು ತಡೆಹಿಡಿಯಬೇಕೆಂದು ಸರ್ಕಾರ ಅಂತರ್ಜಾಲ ಸೇವೆ ಪೂರೈಕೆದಾರರಿಗೆ ಆದೇಶ ನೀಡಿದೆ.
 
ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಪ್ರಚೋದನೆ ನೀಡುವಂತಹ ವಿಷಯಗಳನ್ನು ವಿತರಣೆ ಮತ್ತು ಹಂಚಿಕೆ  ಮಾಡುವುದಕ್ಕೆ ತಡೆಹಿಡಿದು ಇಂಟರ್ನೆಟ್ ನಿಗಾ ಫೌಂಡೇಶನ್ ನ ಸಂಪನ್ಮೂಲಗಳನ್ನು ಜುಲೈ 31ರೊಳಗೆ ಅಳವಡಿಸಿ ಜಾರಿಗೆ ತರಬೇಕೆಂದು ಹೇಳಲಾಗಿದೆ. ಏಪ್ರಿಲ್ 18ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಅಂತರ ಸಚಿವಾಲಯ ಸಮಿತಿ ಮಾಡಿದ ಶಿಫಾರಸಿನಂತೆ ಈ ಆದೇಶ ನೀಡಲಾಗಿದೆ. ಆನ್ ಲೈನ್ ನಲ್ಲಿ ಮಕ್ಕಳಿಗೆ ಲೈಂಗಿಕತೆಗೆ ಪ್ರಚೋದನೆ ನೀಡುವಂತಹ ವಿಷಯಗಳನ್ನು ತಪಾಸಣೆ ಮಾಡಲು ಇದುವರೆಗೆ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಇಂತಹ ಹೆಚ್ಚಿನ ವೆಬ್ ಸೈಟ್ ಗಳು ಕ್ರಿಯಾಶೀಲವಾಗಿದ್ದು ಅವುಗಳ ಯುಆರ್ ಎಲ್ ಬದಲಾಗುತ್ತಿರುತ್ತದೆ. ಅವುಗಳನ್ನು ಗುರುತಿಸಿ ವಿಷಯಗಳನ್ನು ಬ್ಲಾಕ್ ಮಾಡುವುದು ಕೂಡ ಕಷ್ಟವಾಗುತ್ತದೆ.

ಮಕ್ಕಳ ಪೋರ್ನ್ ವೆಬ್ ಸೈಟ್ ಗಳ ಬಗ್ಗೆ ಇಂಗ್ಲೆಂಡ್ ಮೂಲದ ಇಂಟರ್ನೆಟ್ ವಾಚ್ ಫೌಂಡೇಶನ್ ನಿಗಾವಹಿಸುತ್ತಿದೆ.

SCROLL FOR NEXT