ದೇಶ

ಕಾಶ್ಮೀರಿಗಳ ವಿರುದ್ಧದ ದೌರ್ಜನ್ಯವನ್ನು ತಡೆಗಟ್ಟಿ ಎಲ್ಲಾ ರಾಜ್ಯದ ಸಿಎಂ ಗಳಿಗೆ ರಾಜನಾಥ್ ಸಿಂಗ್ ಸೂಚನೆ

Srinivas Rao BV
ನವದೆಹಲಿ: ನಿಮ್ಮ ರಾಜ್ಯಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳ ವಿರುದ್ಧದ ದೌರ್ಜನ್ಯವನ್ನು ತಡೆಗಟ್ಟಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಸೂಚನೆ ನೀಡಿದ್ದಾರೆ. 
ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಕರೆ ನೀಡಿದ್ದಾರೆ. 
ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಯೋತ್ಪಾದಕರು, ಕಲ್ಲು ತೂರಾಟ ನಡೆಸುವವರು ಆರೋಪಿಸಿ ಸ್ಥಳೀಯರು ಹಲ್ಲೆ ನಡೆಸಿದ್ದರು. ಇದಾದ ಬಳಿಕವೇ ಕಾಶ್ಮೀರದಲ್ಲಿ ಸೇನಾ ಪಡೆ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ಪ್ರಕರಣದಿಂದ ಆಕ್ರೋಶಗೊಂಡಿದ್ದ ಉತ್ತರ ಪ್ರದೇಶದ ಜನತೆ, ಕಲ್ಲು ತೂರಾಟ ನಡೆಸುವ ಕಾಶ್ಮೀರಿಗಳು ಕೂಡಲೇ ಉತ್ತರ ಪ್ರದೇಶವನ್ನು ಬಿಟ್ಟು ತೊಲಗಬೇಕೆಂಬ ಹೋರ್ಡಿಂಗ್ ಗಳನ್ನು ಹಾಕಲಾಗಿತ್ತು. ಈ ಎರಡೂ ಘಟನೆಗಳು ನಡೆಯುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳ ವಿರುದ್ಧ ನಡೆಯಬಹುದಾದ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. 
SCROLL FOR NEXT