ಅಲ್-ಖೈದಾ ನಾಯಕ 
ದೇಶ

ಅಲ್ ಖೈದಾ ನಾಯಕನಿಗೆ ಪಾಕಿಸ್ತಾನದ ಐಎಸ್ಐನಿಂದ ರಕ್ಷಣೆ: ವರದಿ

ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ರಕ್ಷಣೆ ನೀಡುತ್ತಿದೆ ಎಂದು ನ್ಯೂಸ್ ವೀಕ್ ವರದಿ ಪ್ರಕಟಿಸಿದೆ.

ವಾಷಿಂಗ್ ಟನ್: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ರಕ್ಷಣೆ ನೀಡುತ್ತಿದೆ ಎಂದು ನ್ಯೂಸ್ ವೀಕ್ ವರದಿ ಪ್ರಕಟಿಸಿದೆ. 
ಅಲ್ ಖೈದಾ ಉಗ್ರ ಸಂಘಟನೆಯ ಮುಖಂಡ ಅಯ್ಮಾನ್ ಅಲ್-ಜವಾಹರಿ ಕರಾಚಿಯಲ್ಲಿದ್ದು, ಪಾಕಿಸ್ತಾನದ ನಟೋರಿಯಸ್ ಗುಪ್ತಚರ ಸಂಸ್ಥೆ ಐಎಸ್ಐ ರಕ್ಷಣೆಯಲ್ಲಿ ವಾಸಿಸುತ್ತಿದ್ದಾನೆ ಎಂದು ನ್ಯೂಸ್ ವೀಕ್ ಹೇಳಿದೆ. ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನೊಬ್ಬನ ಅಡಗುದಾಣದ ಬಗ್ಗೆ ಮಾಹಿತಿಯುಳ್ಳ ವರದಿಯನ್ನು ನ್ಯೂಸ್ ವೀಕ್ ಪ್ರಕಟಿಸಿದೆ. 
ಇತರ ಪ್ರಕರಣಗಳಂತೆಯೇ ಅಯ್ಮಾನ್ ಅಲ್-ಜವಾಹರಿ ಪ್ರಕರಣದಲ್ಲಿಯೂ ಸ್ಪಷ್ಟ, ನಿಖರ ಸಾಕ್ಷ್ಯಾಧಾರಗಳಿಲ್ಲ ಎಂದು ಅಮೆರಿಕಾದ 4 ಅಧ್ಯಕ್ಷರುಗಳಿಗೆ ದಕ್ಷಿಣ ಏಷ್ಯಾ ಹಾಗೂ ಮಧ್ಯಪ್ರಾಚ್ಯಗಳ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆಗಾರಾಗಿದ್ದ ಅಮೆರಿಕ ಗುಪ್ತಚರ ಇಲಾಖೆ ಸಿಐಎಯ ಹಿರಿಯ ವ್ಯಕ್ತಿ ಬ್ರೂಸ್ ರಿಡೆಲ್ ಹೇಳಿದ್ದಾರೆ. 
ಆದರೆ ಅಲ್-ಖೈದಾ ಸಂಘಟನೆಯ ಮುಖ್ಯಸ್ಥನಾಗಿದ್ದ ಬಿನ್ ಲಾಡೆನ್ ಹತ್ಯೆಯಾದ ಪಾಕಿಸ್ತಾನದ ಅಬ್ಬೋಟಾಬಾದ್ ನಲ್ಲಿ ಸಿಕ್ಕ ಕೆಲವು ಸಂಗತಿಗಳಿಂದ ಕೆಲವು ಮಹತ್ವದ ಸುಳಿವು ದೊರೆತಿದೆ. ಅಮೆರಿಕಾದವರು ಬಂದು ಅಯ್ಮಾನ್ ಅಲ್-ಜವಾಹರಿ ಮೇಲೆ ದಾಳಿ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕರಾಚಿಯನ್ನು ಆಯ್ಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಸಿಐಎ ಅಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. 
ಒಸಾಮಾ ಬಿನ್ ಲ್ಯಾಡೆನ್ ನ್ನು 2011 ರಲ್ಲಿ ಹತ್ಯೆ ಮಾಡಿದ್ದಾಗ ನಡೆಸಿದ ಕಾರ್ಯಾಚರಣೆಯನ್ನು ಕರಾಚಿಯಲ್ಲಿ ಈಗ ಪುನರಾವರ್ತನೆ ಮಾಡುವುದು ಅಮೆರಿಕಾಗೆ ಸವಾಲಿನ ಪ್ರಶ್ನೆಯಾಗಿದೆ. ಒಂದು ವೇಳೆ ಆತ ಅಪ್ಘಾನಿಸ್ತಾನ-ಪಾಕಿಸ್ತಾನದ ಗಡಿಯಲ್ಲಿದ್ದಿದ್ದರೂ ಆತನನ್ನು ಹಿಡಿಯುವುದು ಸಾಧ್ಯವಾಗುತ್ತಿತ್ತು ಎಂದು ಸಿಐಎ ಹಿರಿಯ ಅಧಿಕಾರಿ ಅಯ್ಮಾನ್ ಅಲ್-ಜವಾಹರಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT