ನವದೆಹಲಿ: ಜೂನ್ ನಂತರ ನಿಮ್ಮ ಎಲ್ಲಾ ರೈಲು ಸಂಬಂಧಿತ ಪ್ರಶ್ನೆಗಳಿಗೆ ಹಿಂದ್ ರೈಲ್ ಮೂಲಕ ಉತ್ತರ ಸಿಗಲಿದೆ. ಈಗಿರುವ ರೈಲು ಅಪ್ಲಿಕೇಶನ್ ಗಳಲ್ಲಿ ಅದು ಸಂಯೋಜಿಸಲ್ಪಟ್ಟಿದೆ.
ಭಾರತೀಯ ರೈಲ್ವೆ ಹೊಸ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದ್ದು ಸಂಪೂರ್ಣ ವಿಚಾರಣಾ ವ್ಯವಸ್ಥೆಯನ್ನು ನೀಡುತ್ತದೆ. ರೈಲ್ವೆಯ ಆಗಮನ, ನಿರ್ಗಮನ, ವಿಳಂಬ,ರದ್ದಾಗಿರುವುದು, ಪ್ಲಾಟ್ ಫಾರ್ಮ್ ಸಂಖ್ಯೆ, ರೈಲ್ವೆ ಪ್ರಯಾಣಿಸುವ ಸ್ಥಳ, ಸೀಟುಗಳ ಲಭ್ಯತೆ ಹೀಗೆ ಅನೇಕ ಮಾಹಿತಿಗಳನ್ನು ಪ್ರಯಾಣಿಕರು ಈ ಆಪ್ ಮೂಲಕ ಪಡೆದುಕೊಳ್ಳಬಹುದು. ಅದರ ಹೊರತಾಗಿ, ಟ್ಯಾಕ್ಸಿ ಬುಕ್ ಮಾಡುವುದು, ಪೋರ್ಟಲ್ ಸೇವೆ, ವಿಶ್ರಾಂತಿ ಕೊಠಡಿ, ಹೊಟೇಲ್ ಗಳು, ಪ್ರವಾಸಿ ಪ್ಯಾಕೇಜ್ ಗಳು, ಇ-ಕ್ಯಾಟರಿಂಗ್ ಮತ್ತು ಇತರ ಪ್ರಯಾಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆಯಬಹುದು.
ಆದಾಯ ಹಂಚಿಕೆ ಮಾದರಿಯಲ್ಲಿ ಸೇವೆಯನ್ನು ಒದಗಿಸುವವರೊಂದಿಗೆ ರೈಲ್ವೆ ಇಲಾಖೆ ಈ ಎಲ್ಲಾ ಸೇವೆಗಳನ್ನು ಒದಗಿಸುತ್ತದೆ. ಈ ಮೂಲಕ ಆದಾಯ ಹಂಚಿಕೆ ವೇದಿಕೆಯನ್ನು ಸಾರ್ವಜನಿಕ ಸೇವೆಯ ಜೊತೆ ಒದಗಿಸಲಿದ್ದು ಪ್ರತಿವರ್ಷ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ರೈಲ್ವೆಯಲ್ಲಿ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ಪ್ರಯಾಣಿಕರು ದೂರುತ್ತಿರುತ್ತಾರೆ. ಹೊಸ ಅಪ್ಲಿಕೇಶನ್ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಿದೆ. ಹೊಸ ಅಪ್ಲಿಕೇಶನ್ ಜೂನ್ ನಲ್ಲಿ ಆರಂಭವಾಗುತ್ತಿದ್ದು ಅದು ಕೇವಲ ಮಾಹಿತಿ ಒದಗಿಸುವುದು ಮಾತ್ರವಲ್ಲದೆ ನೀವು ರೈಲು ಎಲ್ಲಿದೆ ಎಂದು ಕೂಡ ಕಂಡುಹಿಡಿಯಬಹುದು ಎನ್ನುತ್ತಾರೆ ರೈಲ್ವೆ ಮಂಡಳಿ ಸದಸ್ಯ ಮೊಹಮ್ಮದ್ ಜಮ್ಶೇಡ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos