ದೇಶ

ದೆಹಲಿ: ಕಸಾಯಿಖಾನೆಗೆ ದನಸಾಗಗಿಸುತ್ತಿದ್ದ ಮೂವರ ಮೇಲೆ ಹಲ್ಲೆ

Srinivas Rao BV
ನವದೆಹಲಿ: ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂವರು ವ್ಯಕ್ತಿಗಳ ಮೇಲೆ ಪ್ರಾಣಿ ರಕ್ಷಣಾ ಗುಂಪಿನ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. 
ದಕ್ಷಿಣ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಎಮ್ಮೆಗಳನ್ನು ಗುರಗಾಂವ್ ಘಜಿಪುರಕ್ಕೆ ಎಮ್ಮೆಗಳನ್ನು ಸಾಗಿಸಲಾಗುತ್ತಿದ್ದ ಮೂವರ ಮೇಲೆ ಪ್ರಾಣಿ ಹಕ್ಕುಗಳ ರಕ್ಷಣಾ ತಂಡದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ದನಗಳನ್ನು ಅಮಾನುಷ ರೀತಿಯಲ್ಲಿ ನೋಡಿಕೊಳ್ಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
ಹಲ್ಲೆಗೊಳಗಾದ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳು ಉಂಟಾಗಿದ್ದು, ಏಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಪೀಪಲ್ಸ್ ಫಾರ್ ಅನಿಮಲ್ಸ್ ಎಂಬ ಎನ್ ಜಿಒ ಸದಸ್ಯರು ಪ್ರಾಣಿಗಳ ಮೇಲೆ ನಡೆಯುವ ಅಮಾನುಷ ದಾಳಿಯನ್ನು ತಡೆಗಟ್ಟಲು ಕಾರ್ಯನಿರ್ವಹಿಸುತ್ತಿರುವ ಸಂಘಟನೆಯಾಗಿದೆ. ಈ ಸಂಘಟನೆಯವರು ಗೋ ರಕ್ಷಕರಲ್ಲ ಎಂದು ಹೇಳಿದ್ದಾರೆ. 
ಕೇಂದ್ರ ಸಚಿವೆ ಮನೇಕಾ ಗಾಂಧಿ ಪೀಪಲ್ಸ್ ಫಾರ್ ಅನಿಮಲ್ಸ್ ಎನ್ ಜಿಪ್ ಗೆ ಅಧ್ಯಕ್ಷರೂ ಆಗಿದ್ದು, ದಾಳಿ ನಡೆಸಿದವರಿಗೂ ಪಿಎಫ್ಎ ಸಂಘಟನೆಗೆ ಸಂಬಂಧಪಟ್ಟವರಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
SCROLL FOR NEXT