ಪಾಟ್ನಾ: ಬಿಹಾರದ ಉಭಯ ಸದನಗಳಲ್ಲಿಯೂ ಸರಕು ಮತ್ತು ಸೇವಾ ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಬಿಹಾರ ತೆರಿಗೆ ತಿದ್ದುಪಡಿ ಮಸೂದೆಯನ್ನೂ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಜುಲೈ 1 ರಿಂದ ಜಿಎಸ್ ಟಿ ಜಾರಿಗೆ ಪೂರಕವಾಗಿ ರಾಜ್ಯ ಸರ್ಕಾರಗಳೂ ಸಹ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಬೇಕಿದ್ದು, ತೆಲಂಗಾಣದ ನಂತರ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸುವ ರಾಜ್ಯ ಬಿಹಾರವಾಗಿದೆ. ಧ್ವನಿಮತದ ಮೂಲಕ ಬಿಹಾರದ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿಎಸ್ ಟಿ ಮಸೂದೆ ಅಂಗೀಕಾರವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.
ಸದನದ ಎಲ್ಲಾ ಸದಸ್ಯರಿಗೂ ಸಿಎಂ ನಿತೀಶ್ ಕುಮಾರ್ ಧನ್ಯವಾದ ತಿಳಿಸಿದ್ದು, ಬೇರೆ ಪಕ್ಷದ ಸರ್ಕಾರವಿದ್ದರೂ ಜಿಎಸ್ ಟಿ ಮಸೂದೆಗೆ ಬೆಂಬಲ ನೀಡಲಾಗಿದೆ ಎಂದು ಹೇಳಿದ್ದಾರೆ.