ಇನ್ನು ಮುಂದೆ ಗೋವುಗಳಿಗೂ ಆಧಾರ್ ಕಾರ್ಡ್ 
ದೇಶ

ಇನ್ನು ಮುಂದೆ ಗೋವುಗಳಿಗೂ ಆಧಾರ್ ಕಾರ್ಡ್

ಗೋರಕ್ಷಣೆಯ ಹೆಸರಿನಲ್ಲಿ ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೋವುಗಳಿಗೂ ಆಧಾರ್ ಕಾರ್ಡ್ ನೀಡಲು ಚಿಂತನೆ ನಡೆಸಿದೆ.

ನವದೆಹಲಿ: ಗೋರಕ್ಷಣೆಯ ಹೆಸರಿನಲ್ಲಿ ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೋವುಗಳಿಗೂ ಆಧಾರ್ ಕಾರ್ಡ್ ನೀಡಲು ಚಿಂತನೆ ನಡೆಸಿದೆ. 
ಕೇಂದ್ರ ಸರ್ಕಾರ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ದೇಶಾದ್ಯಂತ ಇರುವ ಗೋವು ಹಾಗೂ ಅದರ ಸಂತತಿಗೆ ಆಧಾರ್ ಕಾರ್ಡ್ ನ್ನು ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದೆ. ಇನ್ನು ಹಾಲು ನೀಡುವುದನ್ನು ನಿಲ್ಲಿಸಿದ ಗೋವುಗಳ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಕಾಳಜಿ ವಹಿಸುವುದಕ್ಕೂ ಸಹ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದ್ದು, ಬಾಂಗ್ಲಾ-ಭಾರತದ ಗಡಿ ಪ್ರದೇಶದಲ್ಲಿ ಗೋವುಗಳ ಸಾಗಣೆಯನ್ನು ತಡೆಗಟ್ಟುವುದರ ಬಗ್ಗೆಯೂ ಪ್ರಸ್ತಾಪಿಸಿದೆ. 
ಗುಜರಾತ್ ನಲ್ಲಿ ಗೋವುಗಳಿಗೆ ಆಧಾರ್ ಕಾರ್ಡ್ ನೀಡಲು ದಲಿತ ಸಂಘಟನೆ ಕಾರ್ಯಕರ್ತರ ಆಗ್ರಹ 
ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ನೀಡಲಾಗುತ್ತಿರುವಂತೆಯೇ, ಹಸುಗಳಿಗೂ ಆಧಾರ್ ಕಾರ್ಡ್ ನ್ನು ನೀಡಬೇಕೆಂದು ಗುಜರಾತ್ ನ ದಲಿತ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. 
ಗುಜರಾತ್ ಸರ್ಕಾರ ಗೋಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ನೀಡಲು ತೀರ್ಮಾನಿಸಿದೆ. ಈ ಬೆನ್ನಲ್ಲೇ ದಲಿತ ಸಂಘಟನೆ ಕಾರ್ಯಕರ್ತರು ಆಧಾರ್ ಕಾರ್ಡ್ ಹಾಗೂ ಹಸುಗಳಿಗೆ ಮೇವು ಡಿಪೋಗಳನ್ನು ಪ್ರಾರಂಭಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ನಾತು ಪರ್ಮಾರ್ ಎಂಬ ದಲಿತ ಕಾರ್ಯಕರ್ತರೊಬ್ಬರು ಸುರೇಂದ್ರನಗರದಲ್ಲಿ ಜೀವ್ ಮಾತ್ರ ಕರುಣಾ ನೆ ಪಾತ್ರ( ಜೀವಿಗಳಿಗೆ ಕರುಣೆ ತೋರುವ ಅಗತ್ಯವಿದೆ) ಎಂಬ ಸಂದೇಶ ಸಾರುವ ಸಮ್ಮೇಳನವನ್ನು ಮೇ.10 ರಂದು ಆಯೋಜಿಸಿದ್ದಾರೆ. ಗುಜರಾತ್ ನ ಉನಾದಲ್ಲಿ ಮೃತಪಟ್ಟ ಹಸುಗಳ ಚರ್ಮ ಸುಲಿದ ಆರೋಪದಲ್ಲಿ ಹಲ್ಲೆಗೊಳಾಗಾಗಿದ್ದ ದಲಿತ ಯುವಕರೂ ಸಹ ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. 
ಗುಜರಾತ್ ನಲ್ಲಿ ಕಸಾಯಿಖಾನೆಯಲ್ಲಿ ಸಾವನ್ನಪ್ಪುವ ಹಸುಗಳಿಗಿಂತ ಪ್ಲಾಸ್ಟಿಕ್ ಸೇವಿಸಿ ಸಾವನ್ನಪ್ಪುವ ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಸುಗಳು ಪ್ಲಾಸ್ಟಿಕ್ ಸೇವಿಸದಂತೆ ಜಾಗೃತಿ ಮೂಡಿಸುವ ಸಲುವಾಗಿ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿರುವ ಹಸುವಿನ ಎತ್ತರದ ಪ್ರತಿಕೃತಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ನಾತು ಪರ್ಮಾರ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಗೋಮಾಳಗಳನ್ನು ಕೈಗಾರಿಕೆಗಳಿಗಾಗಿ ನೀಡಲಾಗುತ್ತಿದೆ ಎಂದು ದಲಿತ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದು, ಅದನ್ನು ವಾಪಸ್ ನೀಡಬೇಕು ರೇಷನ್ ಅಂಗಡಿಗಳ ಮಾದರಿಯಲ್ಲೇ ಹಸುಗಳಿಗೆ ಆಹಾರ ಡಿಪೋಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ. 
ಗುಜರಾತ್ ಗೋಸೇವಾ ಹಾಗೂ ಗೋಮಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಲ್ಲಭ್ ಕಥಿರಿಯಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಹಸುಗಳ ನೋಂದಣಿ ನಡೆದಿದೆ, ಆದ್ದರಿಂದ ಆಧಾರ್ ಕಾರ್ಡ್ ನ ಅಗತ್ಯವಿಲ್ಲ. ಇನ್ನು ಬೇಸಿಗೆಯ ಸಂದರ್ಭದಲ್ಲಿ ಮೇವು ಕೊರತೆ ಎದುರಾಗಲಿದ್ದು, ರಿಯಾಯಿತಿ ದರದಲ್ಲಿ ಮೇವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!