ಶ್ರೀನಗರ: ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ಸಂಘಟಿಸುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 300ಕ್ಕೂ ಹೆಚ್ಚು ವಾಟ್ಸಪ್ ಗುಂಪುಗಳಲ್ಲಿ ಶೇ.90 ರಷ್ಟು ಗುಂಪುಗಳನ್ನು ಮುಚ್ಚಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಶ್ಮೀರದ ವಿವಿಧೆಡೆ ನಡೆಸಲಾಗುತ್ತಿದ್ದ ಎನ್ ಕೌಂಟರ್ ಸ್ಥಳಗಳಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗಳನ್ನು ವಿಫಲಗೊಳಇಸುವ ನಿಟ್ಟಿನಲ್ಲಿ ಕಲ್ಲೆಸೆತಗಾರರನ್ನು ವಾಟ್ಸಪ್ ಗುಂಪುಗಳ ಮೂಲಕ ಸಂಘಟಿಸಲಾಗುತ್ತಿತ್ತು.
ಇಂತಹ ಗುಂಪುಗಳು ಮತ್ತು ಅವುಗಳ ಅಡ್ಮಿನಿಸ್ಟ್ರೇಟರ್ ಗಳನ್ನು ಗುರಿತಿಸಿ ಕರೆಸಿಕೊಂಡ ಪೊಲೀಸರು ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಅವುಗಳಲ್ಲಿ ಕಳೆದ 3 ವಾರಗಳಲ್ಲಿ ಶೇ.90 ರಷ್ಟು ಗುಂಪುಗಳನ್ನು ಮುಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.