ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮದ್ಯದ ಅಂಗಡಿಗಳನ್ನು ಪುನಾರಂಭಿಸುವ ತಮಿಳುನಾಡು ಸರ್ಕಾರದ ಯತ್ನಕ್ಕೆ ಹೈಕೋರ್ಟ್ ನಕಾರ

ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಪುನಃ ರಚಿಸುವ ಮೂಲಕ ಹೆದ್ದರಿಗಳ ಬಳಿಯೇ ಮದ್ಯದ ಅಂಗಡಿಗಳನ್ನು ಪ್ರಾರಂಭಿಸುವ ತಮಿಳುನಾಡು ಸರ್ಕಾರದ ಯತ್ನವನ್ನು ಹೈಕೋರ್ಟ್ ತಡೆಹಿಡಿದಿದೆ.

Srinivas Rao BV
Updated On : 25 Apr 2017, 7:29 am
ಚೆನ್ನೈ: ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಪುನಃ ರಚಿಸುವ ಮೂಲಕ ಹೆದ್ದರಿಗಳ ಬಳಿಯೇ ಮದ್ಯದ ಅಂಗಡಿಗಳನ್ನು ಪ್ರಾರಂಭಿಸುವ ತಮಿಳುನಾಡು ಸರ್ಕಾರದ ಯತ್ನವನ್ನು ಹೈಕೋರ್ಟ್ ತಡೆಹಿಡಿದಿದೆ. 
ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಪುನಃ ರಚನೆ ಮಾಡುವ ಸರ್ಕಾರದ ನಿರ್ಧಾರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಹೆದ್ದಾರಿಗಳ ಬಳಿ ಮದ್ಯದ ಅಂಗಡಿಗಳನ್ನು ಪುನಃ ತೆರೆಯುವುದಕ್ಕೆ ತಡೆ ನೀಡಿದೆ. 
ಮುಂದಿನ 3 ತಿಂಗಳ ವರೆಗೆ ಮದ್ಯದ ಅಂಗಡಿಗಳನ್ನು ಹೆದ್ದಾರಿಗಳ ಬಳಿ ತೆರೆಯಬಾರದು ಎಂದು ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ 500 ಮೀ ವ್ಯಾಪ್ತಿಯಲ್ಲಿ ಯಾವುದೇ ಮದ್ಯದ ಅಂಗಡಿಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

Advertisement

Advertisement

ಸುಪ್ರೀಂ ಕೋರ್ಟ್ ನ ಈ ಆದೇಶದ ಪರಿಣಾಮವಾಗಿ ತಮಿಳುನಾಡಿನಲ್ಲಿ 3,300 ಮದ್ಯದ ಅಂಗಡಿಗಳು ಮುಚ್ಚುವ ಸ್ಥಿತಿ ಎದುರಿಸಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ತಮಿಳುನಾಡು ರಾಜ್ಯ ಸರ್ಕಾರ ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಪುನಃ ರಚನೆ ಮಾಡುವ ನಿರ್ಧಾರ ಕೈಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement