ಮಹಿಳಾ ಪಿಎಸ್‌ಐ ಮಂಜಿತ್‌ ಕೌರ್‌ ಮದುವೆ 
ದೇಶ

ಸಲಿಂಗ ವಿವಾಹವಾದ ಪಂಜಾಬ್ ಮಹಿಳಾ ಪಿಎಸ್‌ಐ

ಪಂಜಾಬ್ ನಲ್ಲಿ ಕಳೆದ ಶನಿವಾರ ಮೊದಲ ಸಲಿಂಗ ವಿವಾಹ ನಡೆದಿದ್ದು, ಪಂಜಾಬ್ ಮಹಿಳಾ ಪಿಎಸ್‌ಐ ಮಂಜಿತ್‌ ಕೌರ್‌(35) ಅವರು....

ಜಲಂಧರ್: ಪಂಜಾಬ್ ನಲ್ಲಿ ಕಳೆದ ಶನಿವಾರ ಮೊದಲ ಸಲಿಂಗ ವಿವಾಹ ನಡೆದಿದ್ದು, ಪಂಜಾಬ್ ಮಹಿಳಾ ಪಿಎಸ್‌ಐ ಮಂಜಿತ್‌ ಕೌರ್‌ ಸಂಧು(35) ಅವರು ತಮ್ಮ ಬಾಳ ಸಂಗಾತಿಯಾಗಿ 30 ವರ್ಷದ ಮತ್ತೊಬ್ಬ ಮಹಿಳೆಯೊಂದಿಗೆ ‘ಸಲಿಂಗ ವಿವಾಹ’ವಾಗಿದ್ದಾರೆ.
ಹಿಂದೂ ಸಂಪ್ರದಾಯದಂತೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿದೆ. ಕೌರ್‌ ತಮ್ಮ ಸಂಗಾತಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದು, ‘ಸಲಿಂಗ ವಿವಾಹ’ ತಡೆಯುವಲ್ಲಿ ಕಾನೂನು ವಿಫಲವಾಗಿದೆ ಎಂಬ ಕೂಗೂ ಕೇಳಿಬಂದಿದೆ.
ವೃತ್ತಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಮನ್ ಜಿತ್ ಕೌರ್ ಅವರು ಬಾಲ್ಯದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆಕೆಯ ಹೆಸರನ್ನು ಮಾತ್ರ ಗೌಪ್ಯವಾಗಿಡಲಾಗಿದೆ. 
ಜಂಲಧರ್ ನ ಪುಕ್ಕಾ ಬಾಘ್ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಮದುವೆ ನಡೆದಿದ್ದು, ಬಳಿಕ ಖಾಸಗಿ ಹೋಟೆಲ್ ವೊಂದರಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಆರತಕ್ಷತೆಯಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಲೆಹಂಗದಲ್ಲಿ ಮನ್ ಜಿತ್ ಕೌರ್ ಮಿಂಚಿದರೆ. ಆಕೆಯ ಸಂಗಾತಿ ಕೂಡ ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.
ಪಂಜಾಬಿ ಸಾಂಪ್ರದಾಯಿಕ ವರನ ಉಡುಪು ಧರಿಸಿದ್ದ ಕೌರ್‌, ತಲೆಗೆ ಕೆಂಪು ಪೇಟವನ್ನು ಹಾಕಿಕೊಂಡಿದ್ದರು. ವಧು ಪಂಜಾಬಿ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವಾಧ್ಯಮೇಳಗಳೊಂದಿಗೆ ಕುದುರೆ ಸಾರೋಟಿನಲ್ಲಿ ಕುಳಿತು ಮೆರವಣಿಗೆ ಸಾಗಿದರು.‌

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!