ಸಾಂದರ್ಭಿಕ ಚಿತ್ರ 
ದೇಶ

ಪ.ಬಂಗಾಳ: ಹೂಗ್ಲಿ ನದಿಯಲ್ಲಿ ಜೆಟ್ಟಿ ಕುಸಿದು ಮೂವರು ಸಾವು, ಹಲವರು ನಾಪತ್ತೆ

ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ತಾತ್ಕಾಲಿಕ ಜಟ್ಟಿ(ಹಡಗಿಗೆ ಹತ್ತಲು, ಇಳಿಯುವುದಕ್ಕಾಗಿ ನಿರ್ಮಿಸಿದ ದಂಡೆ) ಕುಸಿದ...

ಹೂಗ್ಲಿ: ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ತಾತ್ಕಾಲಿಕ ಜೆಟ್ಟಿ(ಹಡಗಿಗೆ ಹತ್ತಲು, ಇಳಿಯುವುದಕ್ಕಾಗಿ ನಿರ್ಮಿಸಿದ ದಂಡೆ) ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.
ಹೂಗ್ಲಿಯ ಗಾಗಾ ಘಾಟ್​​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ದಿದಾರೆ. ಕೆಲವು ಈಜು ಬರುವವರು ಈಜಿ ದಡ ಸೇರಿದ್ದಾರೆ. ಕೆಲವರಿಗೆ ಗಾಯಗಳು ಕೂಡ ಆಗಿವೆ. ಆದರೆ ಈಜು ಬರದ ನತದೃಷ್ಟರು ಸಾವಿಗೀಡಾಗಿದ್ದಾರೆ. 20 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ 30ಕ್ಕೂ ಹೆಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ನದಿಯಲ್ಲಿ ಇದ್ದಕ್ಕಿದ್ದಂತೆ ಕಂಡುಬಂದ ರಕ್ಕಸ ಅಲೆಗಳೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿದ್ದು, ನಾಪತ್ತೆಯಾಗಿರುವ ಹಲವರ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ.
ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ರುಪಾಯಿ ಪರಿಹಾರ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ