ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ:ಮದುವೆಯಲ್ಲಿ ಗೋ ಮಾಂಸ ನೀಡದ್ದಕ್ಕಾಗಿ ಪತಿಯಿಂದ ತಲಾಖ್ ಬೆದರಿಕೆ

ಮದುವೆ ಸಮಾರಂಭವೊಂದರಲ್ಲಿ ಗೋಮಾಂಸ ಪೂರೈಸದಕ್ಕಾಗಿ ನವ ವಿವಾಹಿತೆಗೆ ತಲಾಖ್ ನೀಡುವುದಾಗಿ...

ನವದೆಹಲಿ:  ಮದುವೆ ಸಮಾರಂಭವೊಂದರಲ್ಲಿ ಗೋಮಾಂಸ ಪೂರೈಸದಕ್ಕಾಗಿ ನವ ವಿವಾಹಿತೆಗೆ ತಲಾಖ್ ನೀಡುವುದಾಗಿ ವರನ ಕುಟುಂಬದವರು ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ಕೇರಿ ಎಂಬಲ್ಲಿ ನಡೆದಿದೆ.
ನವ ವಿವಾಹಿತೆ ಯುವತಿಯನ್ನು ಅಫ್ಸಾನಾ ಎಂದು ಗುರುತಿಸಲಾಗಿದ್ದು, ಮದುವೆ ದಿನ ಆಕೆಯ ಮನೆಯವರು ಗೋಮಾಂಸ ನೀಡಿ ಆತಿಥ್ಯ ಮಾಡದ್ದಕ್ಕಾಗಿ ತಲಾಖ್ ನೀಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಅಫ್ಸಾನಾಳ ತಂದೆ ಸಲರಿ ಮದುವೆ ಬಳಿಕ ಆಕೆಯ ಮನೆಗೆ ಏನೋ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಗಳಿಗೆ ಗಂಡನ ಮನೆಯವರು ಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಗಂಡನ ಮನೆಯವರು ಆಕೆಗೆ ವಿಚ್ಛೇದನ ಕೊಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮದುವೆ ದಿನ ಗೋಮಾಂಸ ನೀಡಿಲ್ಲ ಎಂದು ಮತ್ತು ಕುಟುಂಬದವರಿಗೆ  ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದಿದ್ದಾರೆ.
ಮೊನ್ನೆ ಏಪ್ರಿಲ್ 22ರಂದು ಶಾಸ್ತ್ರೋಕ್ತವಾಗಿ ಅದ್ದೂರಿಯಾಗಿ ವಿವಾಹ ನೆರವೇರಿಸಿದ್ದೆವು. ವರದಕ್ಷಿಣೆ ಕೂಡ ನೀಡಿದ್ದೇವೆ. ವಿಚ್ಛೇದನ ಬೆದರಿಕೆಯಿಂದಾಗಿ ನಾವು ಬಹಳ ಆತಂಕಕ್ಕೀಡಾಗಿದ್ದೇವೆ ಎನ್ನುತ್ತಾರೆ ಸಲರಿ.
ಗಂಡನ ಮನೆಯವರ ಬೆದರಿಕೆ ನಂತರ ಸಲರಿ ಗ್ರಾಮದ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು ತಮ್ಮ ಮಗಳಿಗೆ ರಕ್ಷಣೆ ಒದಗಿಸಿ ಎಂದು ತಂದೆ ಕೇಳಿದ್ದಾರೆ. ಸ್ವತಃ ಅಫ್ಸಾನಾ ಬಹ್ರೈಚ್ ನ ಪೊಲೀಸ್ ಠಾಣೆಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. 
ಆದರೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ತಮಗೆ ರಕ್ಷಣೆ ಮತ್ತು ನ್ಯಾಯ ಒದಗಿಸಿ ಎಂದು ಅಫ್ಸಾನಾ ತನ್ನ ತಂದೆ ಮತ್ತು ಸೋದರ ನಸೀಮ್ ಜೊತೆ ಒಂದು ಪೊಲೀಸ್ ಠಾಣೆಯಿಂದ ಇನ್ನೊಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. ಇದೀಗ ಕೊನೆಯದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದಲಾದರೂ ನೆರವು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಈ ಯುವತಿ ಮತ್ತು ಆಕೆಯ ತಂದೆ, ಸೋದರರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT