ಭುವನೇಶ್ವರ: ಒಡಿಶಾದ ಮಾಲ್ಕನ್ ಗಿರಿಯಲ್ಲಿ ಮಾವೋವಾದಿ ಗೆರಿಲ್ಲಾಗಳ ದಾಳಿಗೆ ಇಬ್ಬರು ಗ್ರಾಮಸ್ಥರು ಬಲಿಯಾಗಿದ್ದಾರೆ.
ಏ.27 ರಂದು ರಾತ್ರಿ (ಗುರುವಾರ) ಗ್ರಾಮಸ್ಥರ ಮೇಲೆ ದಾಳಿ ನಡೆದಿದ್ದು, ಹತ್ಯೆಯಾದ ಗ್ರಾಮಸ್ಥರನ್ನು ಬಿಸು ಕಿಸಾನಿ ಹಾಗೂ ರಾಮ್ ಪಡಯಾಮಿ ಎಂದು ಗುರುತಿಸಲಾಗಿದೆ.
ಇದೇ ವೇಳೆ ಅಂಬಾದಾಲ ಕಾಡಿನಲ್ಲಿ ಮಾವೋವಾದಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮಾವೋವಾದಿಗಳ ಕ್ಯಾಂಪ್ ನ್ನು ನಾಶ ಮಾಡಲಾಗಿದೆ.
15 ಮಾವೋವಾದಿಗಳು ಭದ್ರತಾ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.