ಲಖನೌ: ಉತ್ತರ ಪ್ರದೇಶ ಪೊಲೀಸರು ಪೆಟ್ರೋಲ್ ಕದಿಯಲು ಚಿಪ್ ರೀತಿಯ ಸಾಧನವೊಂದು ಬಳಿಸಿರುವದನ್ನು ಪತ್ತೆ ಹಚ್ಚಿದ ನಂತರ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶನಿವಾರ ಮತ್ತೆ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ.
ಒಂದು ಚಿಪ್ ಅಳವಡಿಸುವ ಮೂಲಕ ಇಂಟರ್ ನೆಟ್ ಸಂಪರ್ಕವಿಲ್ಲದೆ ರಿಮೊಟ್ ಮೂಲಕ ಪೆಟ್ರೋಲ್ ಕದಿಯಲು ಸಾಧ್ಯವಿದೆ ಎಂದಾದರೆ ಇವಿಎಂಗಳಲ್ಲೂ ಆ ರೀತಿ ಮಾಡಬಹುದಲ್ಲ ಎಂದಿದ್ದಾರೆ. ಅಲ್ಲದೆ ತಂತ್ರಜ್ಞಾನದ ದುರ್ಬಳಕೆಯನ್ನು ಮೊದಲು ನಿಲ್ಲಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ವಿಶೇಷ ಕಾರ್ಯಾಚರಣೆ ಪಡೆ, ಲಖನೌನ ಹಲವು ಪೆಟ್ರೋಲ್ ಬಂಕ್ ಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪೆಟ್ರೋಲ್ ಕದಿಯಲು ಚಿಪ್ ರೀತಿಯ ಸಾಧನವನ್ನು ಅಳವಡಿಸಿರುವುದು ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics