ದೇಶ

ನಾಳೆ ಜಾರಿಗೆ ಬರಲಿರುವ ರಿಯಲ್ ಎಸ್ಟೇಟ್ ಕಾಯ್ದೆ, ಹೊಸ ಶಕೆ ಆರಂಭ: ಕೇಂದ್ರ

Sumana Upadhyaya
 ನವದೆಹಲಿ: ದೇಶಾದ್ಯಂತ 76,000 ಕಂಪೆನಿಗಳನ್ನು ಹೊಂದಿರುವ  ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 ನಾಳೆಯಿಂದ ಜಾರಿಗೆ ಬರಲಿದೆ.
ಕಾಯ್ದೆಯ 92 ವಿಭಾಗಗಳು ನಾಳೆಯಿಂದ ಜಾರಿಗೆ ಬರಲಿದ್ದು ಪೂರ್ಣ ಸರ್ಟಿಫಿಕೇಟ್ ನ್ನು ನಿಯಂತ್ರಣ ಪ್ರಾಧಿಕಾರದಿಂದ ಹೊಸ ಪ್ರಾಜೆಕ್ಟ್ ಗಳ ದಾಖಲಾತಿ ಪಡೆಯದಿದ್ದ ಕಂಪೆನಿಗಳು ಇನ್ನು ಮೂರು ತಿಂಗಳೊಳಗೆ ಮಂಜೂರಾತಿ ಪಡೆಯಲಿವೆ.
ಇದರಿಂದ ಭೂಮಿ ಖರೀದಿದಾರರಿಗೆ ತಮ್ಮ  ಹಕ್ಕುಗಳನ್ನು ಕೇಳಬಹುದಾಗಿದ್ದು ದಾಖಲಾತಿ ನಂತರ ಕುಂದುಕೊರತೆಗಳ ಪರಿಹಾರವನ್ನು ಹುಡುಕಬಹುದಾಗಿದೆ.
9 ವರ್ಷಗಳ ನಂತರ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಬರುತ್ತಿದ್ದು ಇದರಿಂದ ಆಸ್ತಿ ಖರೀದಿದಾರರಿಗೆ ಅನುಕೂಲವಾಗಲಿದೆ. ಸ್ವತಃ ಪ್ರಧಾನ ಮಂತ್ರಿಯವರೇ ಈ ಕಾಯ್ದೆ ಜಾರಿಗೆ ಬರುವಲ್ಲಿ ಆಸಕ್ತಿ ಹೊಂದಿದ್ದರು. ಹೆಚ್ಚು ನಿಖರವಾಗಿ, ಪಾರದರ್ಶಕತೆಯಿಂದ ಮತ್ತು ದಕ್ಷತೆಯಿಂದ ಜಾರಿಗೆ ಬರಲಿದೆ. ಹೊಸ ಶಕೆ ಆರಂಭವಾಗಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
SCROLL FOR NEXT