ನವದೆಹಲಿ: ಮಕ್ಕಳು, ಯುವಜನತೆ ಬೇಸಿಗೆ ರಜೆಯನ್ನು ಹೊಸ ವಿಷಯಗಳ ಕಲಿಕೆಗೆ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಜನಾಂಗಕ್ಕೆ ಕರೆ ನೀಡಿದ್ದಾರೆ.
ಆಕಾಶವಾಣಿಯಲ್ಲಿ ತಮ್ಮ ಮನ್ ಕೀ ಬಾತ್ ನ 31ನೇ ಸರಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಕ್ಕಳು, ಯುವಜನತೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಗಾಳಿ, ನೀರಿನ ಮಾಲಿನ್ಯ ತಡೆಯುವುದು ಇಂದಿನ ಮೂಲಭೂತ ಸಮಸ್ಯೆಯಾಗಿದೆ ಎಂದು ಹೇಳಿದ್ದರು.
ಜಗತ್ತಿನಲ್ಲಿ ತಾಪಮಾನ ಏರಿಕೆಯಿಂದ ಋತುಮಾನದಲ್ಲಿ ಬದಲಾವಣೆಗಳು ಆಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಮೇ-ಜೂನ್ ನಲ್ಲಿನ ಬಿಸಿಲು ತಾಪ ಇದೀಗ ಏಪ್ರಿಲ್-ಮೇನಲ್ಲೇ ಆಗುತ್ತಿದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತಿದ್ದು ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇನ್ನು ಕುಡಿಯಲು ನೀರಿಲ್ಲದೆ ಪಶು, ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ಪಶು ಪಕ್ಷಿಗಳ ನೀರಿನ ಸಮಸ್ಯೆ ಮಕ್ಕಳ ಅರಿವಿಗೆ ಬರುತ್ತದೆ. ಅವುಗಳ ಜತೆಗಿನ ಸಂವಹನ ಮಕ್ಕಳಿಗೆ ಆನಂದ ನೀಡುತ್ತದೆ ಎಂದರು.
ಇದೇ ವೇಳೆ ನಾವು ವಿಐಪಿ ಸಂಸ್ಕೃತಿಯ ಬದಲಿ ಇಪಿಐ(ಎಲ್ಲರೂ ಸಮಾನರು) ಎಂಬ ಸಂಸ್ಕೃತಿಯನ್ನು ಹುಟ್ಟು ಹಾಕೋಣ ಎಂದಿದ್ದಾರೆ. ವಿಐಪಿ ಸಂಸ್ಕೃತಿ ನಮ್ಮ ದೇಶಕ್ಕೆ ಮಾರಕವಾಗಿದೆ. ಸರ್ಕಾರಿ ಕಾರಿನಲ್ಲಿ ಕೆಂಪು ಗೂಟವಿದ್ದರೆ ಅವರನ್ನು ವಿಐಪಿಘಲು ಎಂದು ಪರಿಗಣಿಸುತ್ತಿದ್ದೇವು. ಆದರೆ ಇದನ್ನು ತೆಗೆದು ಹಾಕಿದರೂ ಜನರ ಮನಸ್ಸಿನಿಂದ ವಿಐಪಿ ಸಂಸ್ಕೃತಿ ಇನ್ನೂ ಹೊರಕ್ಕೆ ಬಂದಿಲ್ಲ. ಹೀಗಾಗಿ ನಾವು ವಿಐಪಿ ಸಂಸ್ಕೃತಿ ಬದಲು ಎಲ್ಲರೂ ಸಮಾನರು ಎಂಬ ಭಾವನೆಯಿಂದ ಜೀವಿಸೋಣೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics