ದೇಶ

ಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣೆ ಮೂಲಕವಲ್ಲದೆ, ಒಮ್ಮತದಿಂದ ಆಯ್ಕೆ ಮಾಡಬೇಕು: ಅಮರೀಂದರ್ ಸಿಂಗ್

Manjula VN
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರನ್ನು ಒಮ್ಮತದ ಮೂಲಕ ಆಯ್ಕೆ ಮಾಡಬೇಕೆ ಹೊರತು ಚುನಾವಣೆ ಮೂಲಕವಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಸೋನಿಯಾ ಗಾಂಧಿಯವರವೇ ಮತ್ತೊಮ್ಮೆ ಪಕ್ಷದ ಪಕ್ಷರಾಗಿ ಮುಂದುವರಯುವುದಾದರೆ, ಈ ಬಗ್ಗೆ ಅವರು ನಿರ್ಧಾರ ಕೈಗೊಂಡರೆ ನಮಗೆ ಸಂತಸವಾಗುತ್ತದೆ. ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದಾದರೆ, ಒಮ್ಮತದ ಮೂಲಕ ಆಯ್ಕೆ ಮಾಡಬೇಕು. ಚುನಾವಣೆ ಮೂಲಕದಿಂದಲ್ಲ ಎಂದು ಹೇಳಿದ್ದಾರೆ. 
ಚುನಾವಣೆ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಆದರೆ, ಒಮ್ಮತ ಎಂಬುದು ಸದಾಕಾಲ ಪಕ್ಷವನ್ನು ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ. ಪಕ್ಷದ ಅಧ್ಯಕ್ಷರನ್ನೂ ಒಮ್ಮತದ ಮೂಲಕವೇ ಆಯ್ಕೆ ಮಾಡಬೇಕು.
ಸೋನಿಯಾ ಗಾಂಧಿಯವರು ಪಕ್ಷಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿ ಅವರೇ ಮುಂದುವರೆಯುವುದಾದರೆ, ಪಕ್ಷ ಬಹಳ ಸಂಸತ ವ್ಯಕ್ತಪಡಿಸುತ್ತದೆ. ಒಂದು ವೇಳೆ ಸ್ಥಾನ ಬಿಡುವುದಾದರೆ, ರಾಹುಲ್ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ಮನೋಭಾವವನ್ನು ಹೊಂದಿದ್ದಾರೆ. ರಾಹುಲ್ ಪಕ್ಷದ ಉಪಾಧ್ಯಕ್ಷರಾದಾಗಿನಿಂದಲೂ 2-3 ವರ್ಷದಿಂದಲೂ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಸ್ಥಾನಕ್ಕೆ ಅವರು ಸೂಕ್ತರಾಗಿದ್ದಾರೆಂದು ಎನಿಸಿದೆ. ನಾನು ರಾಹುಲ್ ಅವರಿಗೆ ಮತ ಹಾಕುತ್ತೇನೆಂದು ಹೇಳಿದ್ದಾರೆ. 
SCROLL FOR NEXT