ದೇಶ

ಪುಲ್ವಾಮ ಎನ್'ಕೌಂಟರ್ ವೇಳೆ ಕಲ್ಲುತೂರಾಟ: ಪೆಲೆಟ್ ಗನ್ ಗುಂಡಿಗೆ ಗಾಯಗೊಂಡಿದ್ದ ನಾಗರೀಕ ಸಾವು

Manjula VN
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿನ ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪೆಲೆಟ್ ಗನ್ ಗುಂಡಿನ ದಾಳಿಗೆ ಗಾಯಗೊಂಡಿದ್ದ ನಾಗರೀಕ ಗುರುವಾರ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ. 
ಅಕೀಲ್ ಅಹ್ಮದ್ ಭಟ್ ಸಾವನ್ನಪ್ಪಿದ್ದ ನಾಗರೀಕರನಾಗಿದ್ದು, ಈತ ಪುಲ್ವಾಮ ಜಿಲ್ಲೆಯ ಗಬರ್ಪೊರ ಪ್ರದೇಶದ ನಿವಾಸಿಯಾಗಿದ್ದಾನೆ. ನಿನ್ನೆ ಸೇನೆ ಎನ್ ಕೌಂಟರ್ ನಡೆಸುತ್ತಿದ್ದ ವೇಳೆ ಕೆಲ ಸ್ಥಳೀಯರು ಕಲ್ಲು ತೂರಾಟ ನಡೆಸುತ್ತಿದ್ದರು. ಈ ವೇಳೆ ಕಲ್ಲು ತೂರಾಟಗಾರರನ್ನು ಚದುರಿಸುವ ಸಲುವಾಗಿ ಸೇನಾ ಪಡೆ ಪೆಲೆಟ್ ಗನ್ ಬಳಕೆ ಮಾಡಿತ್ತು. ಸ್ಥಳದಲ್ಲಿದ್ದ ಅಕೀಲ್ ಅಹ್ಮದ್ ಭಟ್ ಗಂಭೀರವಾಗಿ ಗಾಯಗೊಂಡಿದ್ದ. 
ಗಾಯಗೊಂಡಿದ್ದ ಅಕೀಲ್ ನನ್ನು ಎಸ್'ಕೆಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 
ನಿನ್ನೆ ಕೂಡ ಉಗ್ರರು ಹಾಗೂ ಯೋಧರ ನಡುವೆ ನಡೆಯುತ್ತಿದ್ದ ಗುಂಡಿನ ಚಕಮಕಿ ವೇಳೆ ಆಕಸ್ಮಿಕವಾಗಿ ಫಿರ್ದೌಸ್ ಅಹ್ಮದ್ ಎಂಬ ನಾಗರಿಕನಿಗೆ ಗುಂಡು ತಗುಲಿ ಮೃತಪಟ್ಟಿದ್ದ. 
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮಂಗಳವಾರ ಮಹತ್ವದ ಯಶಸ್ಸು ದೊರೆತಿತ್ತು. ಹಲವು ವರ್ಷಗಳಿಂದ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿ ಯುವಕರನ್ನು ಉಗ್ರ  ಸಂಘಟನೆಗೆ ಸೆಳೆಯುತ್ತಿದ್ದ ಲಷ್ಕರ್ ಉಗ್ರ ಅಬು ದುಜಾನಾನನ್ನು ಭಾರತೀಯ ಸೇನಾ ಪಡೆ ಗುಂಡಿಟ್ಟು ಹತ್ಯೆ ಮಾಡಿತ್ತು. ಕಾಶ್ಮೀರದ ಹಕ್ರೀಪೋರಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಸುತ್ತುವರೆದ ಸೇನೆ ಇಬ್ಬರೂ ಉಗ್ರರನ್ನು ಹತ್ಯೆ ಮಾಡಿತ್ತು. ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಗೆ ಸೇರ್ಪಡೆಗೊಂಡಿದ್ದ ಅಬು ದುಜಾನಾನನ್ನು ಸೇನಾ ಪಡೆ ಹತ್ಯೆ ಮಾಡಿತ್ತು. 
SCROLL FOR NEXT