ದೇಶ

ಮೀಸಲಾತಿಗೆ ಆಗ್ರಹಿಸಿ ಮರಾಠಿಗರಿಂದ ಬೃಹತ್‌ ಪ್ರತಿಭಟನೆ, ಮುಂಬೈ ಸ್ತಬ್ಧ

Lingaraj Badiger
ಮುಂಬೈ: ಮರಾಠಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಮರಾಠ ಸಮುದಾಯದ ಲಕ್ಷಾಂತರ ಜನರು ಮುಂಬೈನ  ಆಜಾದ್‌ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದು, ವಾಣಿಜ್ಯ ನಗರಿ ಸಂಪೂರ್ಣ ಸ್ತಬ್ಧಗೊಂಡಿದೆ. 
ಇಂದು  ಬೆಳಗ್ಗೆ 11 ಗಂಟೆಗೆ ಮರಾಠ ಕ್ರಾಂತಿ ಮೋರ್ಚಾದ ನೇತೃತ್ವದಲ್ಲಿ ಬೈಕುಲಾದ ವೀರಮಾತಾ ಜೀಜಾಬಾಯಿ ಭೋಸ್ಲೆ ಉದ್ಯಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ರಾಣಿಬಾಗ್‌ನಿಂದ ಸಾಗಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ ಮಾರ್ಗವಾಗಿ ಆಜಾದ್‌ ಮೈದಾನ ತಲುಪಿದೆ.
ಈ ಬೃಹತ್ ಪ್ರತಿಭಟನಾ ಮೆರವಣಿಗೆಯಿಂದಾಗಿ ಮುಂಬೈನ ಜನ ಜೀವನ ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲೆಂದು ಮುಂಬೈನ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೀಸಲಾತಿಗೆ ಒತ್ತಾಯಿಸಿ ಮರಾಠಿಗರು ಮೌನ ಪ್ರತಿಭಟನೆ ನಡೆಸುತ್ತಿದ್ದು, ಮುಂಬೈನಲ್ಲಿ ನಡೆಯುತ್ತಿರುವ ಅತ್ಯಂತ ಬೃಹತ್‌ ಪ್ರತಿಭಟನೆ ಇದಾಗಿದೆ ಎನ್ನಲಾಗುತ್ತಿದೆ. ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 57 ಮೋರ್ಚಾಗಳು ನಡೆದಿದ್ದು 58ನೇ ಬೃಹತ್‌ ಮೋರ್ಚಾ ಮುಂಬಯಿಯಲ್ಲಿ ನಡೆಯುತ್ತಿದೆ. 
SCROLL FOR NEXT