ದೇಶ

ಚೀನಾದೊಂದಿಗೆ ಡೋಕ್ಲಾಮ್ ಬಿಕ್ಕಟ್ಟು: ಗಡಿ ಗ್ರಾಮಗಳ ತೆರವಿಗೆ ಭಾರತೀಯ ಸೇನೆ ಆದೇಶ

Lingaraj Badiger
ನವದೆಹಲಿ: ಸಿಕ್ಕಿಂನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಭಾರತ-ಚೀನಾ-ಭೂತಾನ್ ಟ್ರೈ-ಜಂಕ್ಷನ್ ಸಮೀಪದ ಗಡಿಗಳನ್ನು ತೆರವುಗೊಳಿಸುವಂತೆ ಭಾರತೀಯ ಸೇನೆ ಆದೇಶಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮಗಳ ವರದಿಯ ಪ್ರಕಾರ, ತಕ್ಷಣವೇ ಮನೆ ಕಾಲಿ ಮಾಡುವಂತೆ ನತಾಂಗ್ ಗ್ರಾಮದ ಜನತೆಗೆ ಭಾರತೀಯ ಸೇನೆ ಸೂಚಿಸಿದೆ ಎನ್ನಲಾಗಿದೆ.
ಕಳೆದ ಎರಡು ತಿಂಗಳಿಂದ ಭಾರತ-ಚೀನಾ ಸೇನೆ ಮುಖಾಮುಖಿಯಾಗುತ್ತಿರುವ ಡೋಕ್ಲಾಮ್ ನಿಂದ ನಂತಾಂಗ್ ಕೇವಲ 35 ಕಿ.ಮೀ.ದೂರದಲ್ಲಿದೆ.
ನತಾಂಗ್ ಗ್ರಾಮದ ಜನತೆಗೆ ಮನೆ ಕಾಲಿ ಮಾಡುವಂತೆ ಆದೇಶಿಸಲಾಗಿದೆ. ಆದರೆ ಜನರ ಸುರಕ್ಷತೆಗಾಗಿ ತೆರವುಗೊಳಿಸಲಾಗುತ್ತಿದೆಯೇ ಅಥವಾ ಸುಕ್ನಾದಿಂದ ಡೋಕ್ಲಾಮ್ ಕಡೆಗೆ ಸಾಗುತ್ತಿರುವ 33ನೇ ಸೇನಾ ತುಕಡಿಗೆ ಸೇರಿದ ಸಾವಿರಾರು ಭಾರತೀಯ ಸೈನಿಕರಿಗೆ ಸ್ಥಳಾವಕಾಶ ಕಲ್ಪಿಸಲು ಮನೆ ತೆರವುಗೊಳಿಸುವಂತೆ ಸೂಚಿಸಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.
SCROLL FOR NEXT