ದೇಶ

ಉಪ ರಾಷ್ಟ್ರಪತಿ ವಂಕಯ್ಯ ನಾಯ್ಡುಗೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಸ್ವಾಗತ; ಸಾಧನೆ ಮೆಲುಕು

Manjula VN
ನವದೆಹಲಿ: ದೇಶದ 13ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಉಪಸಭಾಪತಿಯಾಗಿ ರಾಜ್ಯಸಭೆಗೆ ಆಗಮಿಸಿ ವೆಂಕಯ್ಯ ನಾಯ್ಡು ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸ್ವಾಗತಿಸಿದರು. 
ಉಪರಾಷ್ಟ್ರಪತಿಗಳಿಗೆ ಸ್ವಾಗತ ಕೋರಿ ಸಂಸತ್ತಿನಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ ಮೋದಿಯವರು, ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಿದ್ದಾರೆ. ರಾಜ್ಯಸಭೆಯಲ್ಲಿ ದೀರ್ಘಕಾಲಿಕ ಸದಸ್ಯರಾಗಿದ್ದ ಮಾಜಿ ಕೇಂದ್ರ ಸಚಿವರಿಗೆ ಸದನವನ್ನು ಹೇಗೆ ನಡೆಸಬೇಕೆಂಬುದು ಚೆನ್ನಾಗಿ ತಿಳಿಸಿದೆ ಎಂದು ಹೇಳಿದ್ದಾರೆ. 
ಗ್ರಾಮೀಣ ಅಭಿವೃದ್ಧಿ ಕುರಿತಂತೆ ರೂಪಿಸಲಾಗಿದ್ದ ಯೋಜನೆಗಳ ಕುರಿತಂತೆ ನಾಯ್ಡು ಅವರನ್ನು ಕೊಂಡಾಡಿರುವ ಮೋದಿಯವರು, ನಾಯ್ಡು ಅವರು ಒಬ್ಬ ರೈತರ ಮಗನಾಗಿದ್ದು, ಬಡತನ ನಿರ್ಮೂಲನಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರದಲ್ಲಿದ್ದಷ್ಟೂ ದಿನ ಬಡವರ ಹಿತಾಸಕ್ತಿಗಳ ಕುರಿತಂತೆ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನ ಪುತ್ರನೊಬ್ಬ ಉನ್ನತ ಹುದ್ದೆಗೇರಿರುವುದು ಪರಿಪಕ್ವ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT