ರಜನೀಕಾಂತ್ ಗೆ ಅಭಿನಂದನೆ ಸಲ್ಲಿಕೆ
ಚೆನ್ನೈ: ನಟರಾದ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರು ರಾಜಕೀಯ ಸೇರುತ್ತಾರೆ ಎಂಬ ಸುದ್ದಿಗೆ ಇಂಬು ನೀಡುವಂಥ ಬೆಳವಣಿಗೆಯೊಂದು ನಡೆದಿದೆ.
ಡಿಎಂಕೆ ಪಕ್ಷದ ಮುಖವಾಣಿ "ಮುರಸೊಳಿ'ಯ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಈ ಇಬ್ಬರು ನಟರೂ ಪಾಲ್ಗೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಈ ವೇಳೆ ಮಾತನಾಡಿದ ಕಮಲ ಹಾಸನ್ ಸೂಪರ್ ಸ್ಟಾರ್ ರಜನೀಕಾಂತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ನನ್ನ ಸ್ನೇಹಿತ ರಜನಿಕಾಂತ್ ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎಂದು ಕೇಳಿದಾಗ ಅವರು ಖಂಡಿತವಾಗಿ ಬರುತ್ತಾರೆ ಎಂದು ಹೇಳಿದರು, ಆದರೆ ಅವರು ವೇದಿಕೆ ಹಂಚಿಕೊಳ್ಳದೇ ವೀಕ್ಷಕರಾಗಿ ಉಳಿದಿದ್ದಾರೆ. ನಾನು ಕೂಡ ವೇದಿಕೆಗೆ ಬರದೇ ವೀಕ್ಷಕನಾಗೇ ಇರಲು ಬಯಸುತ್ತೇನೆ ಎಂದು ಕಮಲ್ ಹೇಳಿದರು. ಆತ್ಮರಕ್ಷಣೆ ಗಿಂತ ಆತ್ಮ ಗೌರವ ಮುಖ್ಯ ಎಂದು ಕಮಲ್ ಹೇಳಿದ್ದಾರೆ.
ಇದಕ್ಕೂ ಮೊದಲು ನಾನು ಕನ್ನಡಿ ಮುಂದೆ ನಿಂತುಕೊಂಡು ನನ್ನನ್ನು ನೋಡಿಕೊಂಡೆ, ನಂತರ ನಾನಂದುಕೊಂಡೆ, ನಾನೆಂಥ ಮೂರ್ಖ, ಇದು ಎಷ್ಟು ಮಹತ್ವವಾದ ಕಾರ್ಯಕ್ರಮ. ಎಂಥಹ ಅವಕಾಶ ನನಗಾಗಿ ಬಂದಿದೆ ಎಂದು ಯೋಚಿಸಿದ್ದಾಗಿ ಕಮಲ್ ಹಾಸನ್ ಹೇಳಿದ್ದಾರೆ.
ಡಿಎಂಕೆ ಸೇರುವ ವದಂತಿಗಳನ್ನು ನಿರಾಕರಿಸಿದ ಅವರು 1983 ರಲ್ಲಿ ನನಗೆ ಒಂದು ಟೆಲಿಗ್ರಾಮ್ ಬಂದಿತ್ತು. ಏಕೆ ನೀನು ಡಿಎಂಕೆಗೆ ಸೇರಬಾರದೆಂದು ಅದರಲ್ಲಿ ಪ್ರಶ್ನಿಸಲಾಗಿತ್ತು. ಅದನ್ನು ಮಡಚಿದ ನಾನು ನನ್ನ ಬಳಿಯೇ ಇಟ್ಟುಕೊಂಡೆ, ಡಿಎಂಕೆ ಹಿರಿಯ (ಕರುಣಾನಿಧಿ) ಅಂದಿನಿಂದ ಇಂದಿನವರೆಗೂ ಅದರ ಬಗ್ಗೆ ಯಾವತ್ತೂ ಮಾತನಾಡಲಿಲ್ಲ, ಆ ಪ್ರಶ್ನೆಗೆ ನಾನು ಇನ್ನೂ ಉತ್ತರಿಸಿಲ್ಲ ಎಂದು ಕಮಲ್ ಹೇಳಿದ್ದಾರೆ.
ರಾಷ್ಟ್ರಗೀತೆ ಇರುವವರೆಗೂ ದ್ರಾವಿಡ ಇದ್ದೇ ಇರುತ್ತದೆ. ಕೇವಲ ಈ ಕಾರ್ಯಕ್ರಮದ ಸ್ಥಳದಲ್ಲಿ ಮಾತ್ರವಲ್ಲ ಇಡೀ ದೇಶವೇ ಇದನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಆಡಳಿತಾರೂಢ ಎಐಎಡಿಎಂಕೆ ಭ್ರಷ್ಟಾಚಾರ ಕುರಿತು ಟೀಕಿಸಿದ್ದ ಕಮಲ್ ಹಾಸನ್ ಅವರು ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಕುಳಿತಿದ್ದರೆ, ರಜನಿ ಅವರು ಪ್ರೇಕ್ಷಕರ ಸ್ಥಳದಲ್ಲಿ ಮೊದಲ ಸಾಲಲ್ಲಿ ಕುಳಿತಿದ್ದರು. ಕಮಲ್ ಅವರು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಪಕ್ಕದಲ್ಲೇ ಆಸೀನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics