ಸಾಂದರ್ಭಿಕ ಚಿತ್ರ 
ದೇಶ

ಮಲ ಹೊರುವವರ ಮರಣ ಪ್ರಮಾಣದಲ್ಲಿ ಏರಿಕೆ: ಇನ್ನೂ ಜೀವಂತವಾಗಿರುವ ಅನಿಷ್ಟ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಂಕಿಅಂಶ ಪ್ರಕಾರ, 2013ರಿಂದ ಇಲ್ಲಿಯವರೆಗೆ...

ನವದೆಹಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಂಕಿಅಂಶ ಪ್ರಕಾರ, 2013ರಿಂದ ಇಲ್ಲಿಯವರೆಗೆ ಮಲ ಹೊರುವ ಕೆಲಸ(manual scavengers) ಮಾಡುವ 70 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಳೆದ ತಿಂಗಳು 9 ಕಾರ್ಮಿಕರು ಸತ್ತಿದ್ದಾರೆ. ಆದರೆ ಸರ್ಕಾರದ ದಾಖಲೆಗಳ ಪ್ರಕಾರ ಕಳೆದ 4 ವರ್ಷಗಳಲ್ಲಿ ಕೇವಲ 10 ಮಂದಿ ಮಲ ಹೊರುವ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳುತ್ತದೆ. ಆದರೆ ವಾಸ್ತವವಾಗಿ ಮಲ ಹೊರುವ ಕೆಲಸ ಮಾಡುವ ಮೃತಪಟ್ಟ ಕಾರ್ಮಿಕರ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎನ್ನುತ್ತಾರೆ ಮಾನವ ಹಕ್ಕುಗಳ ಕಾರ್ಯಕರ್ತರು.
ಒಳಚರಂಡಿ ಕೆಲಸ ಮಾಡುತ್ತಿದ್ದ ವೇಳೆ ಈ ವರ್ಷ ಮೃತಪಟ್ಟ 126 ಮಂದಿ ಕಾರ್ಮಿಕರಲ್ಲಿ 14 ಮಂದಿ ದೆಹಲಿ ರಾಜ್ಯದವರಾಗಿದ್ದಾರೆ. ಈ ಬಗ್ಗೆ ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿದ ಸಾಮಾಜಿಕ ನ್ಯಾಯ ಸಚಿವಾಲಯ, ಜುಲೈ 31ರವರೆಗೆ ದೇಶದ 13 ರಾಜ್ಯಗಳಲ್ಲಿ 13,368 ಮಲ ಹೊರುವವರಿದ್ದರು. 22 ರಾಜ್ಯಗಳಲ್ಲಿ ಒಬ್ಬನೇ ಒಬ್ಬ ಮಲ ಹೊರುವವರಿಲ್ಲ. ಸಚಿವಾಲಯ ಶೇಕಡಾ 93ರಷ್ಟು ಈ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುತ್ತಿದ್ದು ಅವರಿಗೆ ಒಂದು  ಬಾರಿಗೆ 12,488 ರೂಪಾಯಿ ನೀಡುತ್ತಿದೆ. 
ಕಳೆದ ವರ್ಷದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಮಾನವನ ಮನ ಹೊರುವ ಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿದ್ದು ಅವರು ಹೇಳುವ ಪ್ರಕಾರ ಮತ್ತು ಸಫೈ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜ್ವಾಡ ವಿಲ್ಸನ್ ಹೇಳುವ ಪ್ರಕಾರ, ಸರ್ಕಾರದ ಅಂಕಿಅಂಶಗಳು ವಾಸ್ತವವಾಗಿಲ್ಲ, ಲಕ್ಷಾಂತರ ಮಲ ಹೊರುವ ಕಾರ್ಮಿಕರಿಗೆ ಇನ್ನೂ ಪುನರ್ವಸತಿ ಪರಿಹಾರ ನೀಡಲಾಗಿಲ್ಲ ಎನ್ನುತ್ತಾರೆ.
ಮಾನವನ ಮನವನ್ನು ಶೌಚಾಲಯ ಮತ್ತು ಒಳಚರಂಡಿಗಳಿಂದ ಸ್ವಚ್ಛಗೊಳಿಸುವ, ಒಯ್ಯುವ, ಹೊರಹಾಕುವ ಮತ್ತು ನಿರ್ವಹಿಸುವ ಕೆಲಸಗಳನ್ನು ಮಾಡುವವರನ್ನು ಮ್ಯಾನುವಲ್ ಸ್ಕಾವೆಂಜರ್ ಎಂದು ಕರೆಯುತ್ತಾರೆ. ಈ ಪದ್ಧತಿಗೆ 1993ರಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಆ ಅನಿಷ್ಟ ಪದ್ಧತಿ ಇನ್ನೂ ಕೆಲವು ಕಡೆಗಳಲ್ಲಿ ಜೀವಂತವಾಗಿದೆ. 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಪ್ರಕಾರ, ಗ್ರಾಮೀಣ ಭಾರತದಲ್ಲಿ 1,82,505 ಮನೆಗಳಲ್ಲಿ ಕನಿಷ್ಟ ಒಬ್ಬರಂತೆ ಮಲ ಹೊರುವ ಕಾಯಕದಲ್ಲಿ ತೊಡಗಿದ್ದಾರೆ. ತಮ್ಮ ಸಂಘಟನೆ ನಡೆಸಿದ ಅಧ್ಯಯನ ಪ್ರಕಾರ, ಭಾರತದಲ್ಲಿ 1.6 ಲಕ್ಷ ಮಂದಿ ಮಲ ಹೊರುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ವಿಲ್ಸನ್ ಹೇಳುತ್ತಾರೆ. ಮಲ ಹೊರುವ ಪದ್ಧತಿ ಕುರಿತು ಸರ್ಕಾರದ ನಿರಾಸಕ್ತಿಯೇ ಇದಕ್ಕೆ ಕಾರಣವಾಗಿದೆ. ಇದರಲ್ಲಿರುವ ಶೇಕಡಾ 99ರಷ್ಟು ಮಂದಿ ದಲಿತರು. ಇವರನ್ನು ವೋಟ್ ಬ್ಯಾಂಕ್ ಎಂದು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT