ದೇಶ

ಭಾರತೀಯ ಮತದಾರರ ಪಟ್ಟಿ ಸೇರಿದ 24 ಸಾವಿರ ಎನ್ಆರ್ ಐಗಳು

Lingaraj Badiger
ನವದೆಹಲಿ: ವಿದೇಶಗಳಲ್ಲಿರುವ ಸುಮಾರು 24 ಸವಾರಿ ಭಾರತೀಯ ಸ್ವದೇಶದಲ್ಲಿ ಹಕ್ಕು ಚಲಾಯಿಸುವುದಕ್ಕಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
 ಚುನಾವಣಾ ಆಯೋಗ ವಿದೇಶದಲ್ಲಿರುವ ಭಾರತೀಯ ಮತದಾರರಿಗಾಗಿ ವೆಬ್ ಸೈಟ್ ವೊಂದನ್ನು ವಿನ್ಯಾಸಗೊಳಿಸಿದ್ದು, ಮೇಲಿಂದ ಮೇಲೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನೂ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಈ ಮೂಲಕ ಹೆಚ್ಚಿನ ಜನರು ನೋಂದಾವಣೆ ಮಾಡಿಕೊಳ್ಳಲು ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿದೆ. 
ಇದುವರೆಗೆ ಒಟ್ಟು 24,348 ಜನರು ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 23,556 ಕೇರಳದವರಾಗಿದ್ದರೆ, 364 ಜನ ಪಂಜಾಬಿಗರು ಮತ್ತು 14 ಜನ ಗುಜಾರಾತ್ ಮೂಲದವರಾಗಿದ್ದಾರೆ. 
ಭಾರತದ ಪೌರತ್ವ ಹೊಂದಿರುವ ಬೇರೆ ದೇಶದ ಪೌರರಲ್ಲದವರಿಗೆ ಭಾರತದ ಚುನಾವಣೆಗಳಲ್ಲಿ ಮತದಾನ ಮಾಡುವ ಅವಕಾಶ ಇದೆ. ಚುನಾವಣಾ ಆಯೋಗದ ವೆಬ್ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಒಮ್ಮೆ ಮತದಾರರು ನೋಂದಣಿ ಮಾಡಿಕೊಂಡ ನಂತರ ಆಯಾ ಕ್ಷೇತ್ರಗಳಲ್ಲಿ ಮತದಾನ ಇದ್ದಾಗ ಪೋಸ್ಟ್ ಮೂಲಕ ಮತದಾರರನ್ನು ಚುನಾವಣಾ ಆಯೋಗ ಸಂಪರ್ಕಿಸಲಿದೆ. 
SCROLL FOR NEXT