ದೇಶ

ಪಶ್ಚಿಮ ಬಂಗಾಳ ಪುರಸಭಾ ಚುನಾವಣೆ: ಎಲ್ಲಾ 7 ಸ್ಥಾನ ಗೆದ್ದ ಟಿಎಂಸಿ, ಬಿಜೆಪಿಗೆ 2 ನೇ ಸ್ಥಾನ

Raghavendra Adiga
ಕೊಲ್ಕತ್ತ: ಪಶ್ಚಿಮ ಬಂಗಾಳ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪಕ್ಷವು ಇಲ್ಲಿನ ಏಳು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿಯೂ ಜಯ ದಾಖಲಿಸಿದೆ. ಭಾನುವಾರ ನಡೆದ ಮತದಾನದ ಫಲಿತಾಂಶವು ಇಂದು ಹೊರಬಿದ್ದಿದ್ದು ದಕ್ಷಿಣ ದಿನಾಜ್ಪುರ ಜಿಲ್ಲೆಯಲ್ಲಿ ಹೊಸದಾಗಿ ರೂಪುಗೊಂಡ ಬ್ಯೂನಿಯಾದ್ಪುರ್ ಪುರಸಭೆಯಲ್ಲಿ 14 ರಲ್ಲಿ 13 ವಾರ್ಡ್ ಗಳನ್ನು ಆಡಳಿತಾರೂಢ ಪಕ್ಷ ಗೆದ್ದುಕೊಂಡಿದ್ದು ನಾಡಿಯಾ ಜಿಲ್ಲೆಯಲ್ಲಿ ಕೂಪರ್ಸ್ ಕ್ಯಾಂಪ್ನ 12 ವಾರ್ಡ್ ಗಳನ್ನು ಸಹ ತನ್ನ ಕೈವಶ ಮಾಡಿಕೊಂಡಿದೆ. ಇದು ಕಾಂಗ್ರೆಸ್ ನ ಹಿರಿಯ ನಾಯಕ ಶಂಕರ್ ಸಿಂಗ್ ರ ಪ್ರತಿಷ್ಠೆಯ ಕ್ಷೇತ್ರ ಎನ್ನುವುಉದು ವಿಶೇಷ. 
ಉಳಿದಂತೆ ಬಿರ್ಭುಮ್ ಜಿಲ್ಲೆಯ ನಲ್ಹತಿ ಪುರಸಭೆಯಲ್ಲಿ 16 ರಲ್ಲಿ 14 ವಾರ್ಡ್, ಜಲ್ಪೈಗುರಿ ಜಿಲ್ಲೆಯ ಧುಪ್ಪುರಿ ಪುರಸಭೆಯಲ್ಲಿ 16 ರಲ್ಲಿ 12 ವಾರ್ಡ್ ಮತ್ತು ಪುರ್ಬ ಮದಿನಿಪುರ್ ಜಿಲ್ಲೆಯ ಪನ್ಸುರಾ ಪುರಸಭೆಯ 18  ಸ್ಥಾನಗಳಲ್ಲಿ 17 ನ್ನು ತನ್ನ ತೆಕ್ಕೆಗೆ ಬಾಚಿಕೊಂಡಿದೆ. 
ಬಂದರು ನಗರವಾದ ಹಲ್ದಿಯಾ ಪುರಸಭೆಯ ಎಲ್ಲಾ 29 ವಾರ್ಡ್ ಗಳನ್ನು ಗೆಲ್ಲುವ ಮೂಲಕ ಟಿಎಂಸಿ ಸಿಪಿಎಂ ನ ಭದ್ರಕೋಟೆಯೊಳಗೆ ಪ್ರವೇಶ ಮಾಡಿದೆ. 
ಆದಳಿತಾರೂಢ ಪಕ್ಷವು ದುರ್ಗಾಪುರ ಮುನಿಸಿಪಲ್ ಕಾರ್ಪೊರೇಶನ್ ನ ಎಲ್ಲಾ 43 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಭಾನುವಾರ ನ್ಡೆದ ಮತದಾನದ ವೇಳೆ ದುರ್ಗಾಪುರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ಸಂಭವಿಸಿದ್ದ ವರದಿ ಆಗಿತ್ತು. 
SCROLL FOR NEXT