ಬಿಹಾರದಲ್ಲಿ ದೋಣಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಪಾಟ್ನಾ: ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್ಡಿಆರ್ಎಫ್) ನ ದೋಣಿಯೊಂದು ಫರ್ಜಾನಾ ಖತೂನ್ ಮತ್ತು ಅವರ ನವಜಾತ ಶಿಶುವಿನ ಪಾಲಿಗೆ ಜೀವ ರಕ್ಷಕ ವಾಹನವಾಗಿ ಬಂದಿತ್ತು. ಬಿಹಾರದ ಪ್ರವಾಹ ಪೀಡಿತ ಮಧುಬಾನಿ ಜಿಲ್ಲೆಯ ಫರ್ಜಾನಾ ಖತೂನ್ ದೋಣಿ ಯಲ್ಲಿ ತನ್ನ ಮಗುವಿಗೆ ಜನ್ಮ ನೀಡಿದಳು. ಎನ್ಡಿಆರ್ಎಫ್ ವೈದ್ಯಕೀಯ ತಂಡವು ವೈದ್ಯಕೀಯ ಸಹಕಾರ ನೀಡಿತು.
ಮಂಗಳವಾರ ರಾತಿ ಉತ್ತರ ಜಿಲ್ಲಾ ವಿಭಾಗದ ನಿಪಟ್ಟಿ ಬ್ಲಾಕ್ನಲ್ಲಿರುವ ಕಹ್ರಾ ಗ್ರಾಮದ ಸುತ್ತಲೂ ಪ್ರವಾಹ ಆವರಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಿಂದ ಗ್ರಾಮ ಸಂಪರ್ಕವನ್ನು ಕಳೆದುಕೊಂಡಿತ್ತು. ಫರ್ಜಾನಾ ತುಂಬು ಗರ್ಭಿಣಿಯಾಗಿದ್ದು ಅವರ ಪತಿ ಬಿಲಾಲ್ ಮತ್ತು ಫರ್ಜಾನಾ ಇಬ್ಬರಿಗೂ ದಿಕ್ಕು ತೋಚದಂತಾಗಿತ್ತು. ಫರ್ಜಾನಾ ಗೆ ಹೊಟ್ಟೆ ನೋವು ಕಾಣಿಸುವುದರೊಡನೆ ಅವರು ರಾತ್ರಿ ಎಲ್ಲಾ ಅಳುತ್ತಾ ಕಳೆದರು
"ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದ ಕಾರಣ ನನ್ನ ಮೊಬೈಲ್ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಸುತ್ತಲಿನ ಹಳ್ಳಿಗರಿಂದಲೂ ನಾವು ಅಕ್ಷರಶಃ ಬೇರಾಗಿದ್ದೆವು. ಹಳ್ಳಿಯ ಬೇರೆ ಭಾಗದಲ್ಲಿ ಪರಿಹಾರ ಕಾರ್ಯಕ್ಕಾಗಿ ಬಂದಿದ್ದ ಎನ್ಡಿಆರ್ಎಫ್ ನಮ್ಮ ಸಂಕಟವನ್ನು ಅರಿತು ನಮ್ಮ ನೆರವಿಗೆ ಬಂದಿತು" ಫರ್ಜಾನಾ ಪತಿ ಬಿಲಾಲ್ ಅಹಮದ್ ಧನ್ಯತೆಯಿಂದ ನುಡಿದರು.
ಫರ್ಜಾನಾದ ಸ್ಥಿತಿಯನ್ನು ನೋಡಿದ್ದ ಎನ್ಡಿಆರ್ಎಫ್ ತಂಡದ ಸದಸ್ಯರು ತಕ್ಷಣ ವೈದ್ಯರನ್ನು ಕರೆದರು. ಹತ್ತು ನಿಮಿಷದಲಿ ವೈದ್ಯರ ತಂಡ ಅಲ್ಲಿಗೆ ಆಗಮಿಸಿತು. "ನನ್ನ ಹೆಂದತಿ ದೋಣಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ನಮ್ಮ ಸುತ್ತಲೂ ಕಿಲೋಮೀಟರ್ ಗಟ್ಟಲೆ ಉದ್ದ ಪ್ರವಾಹವಿತ್ತು. ಎನ್ಡಿಆರ್ಎಫ್ ಸಹಕಾರವಿಲ್ಲದೆ ಹೋಗಿದ್ದರೆ ನಾನು ನನ್ನ ಹೆಂಡತಿ ಮತ್ತು ಮಗುವನ್ನು ಕ್ಳೆದು ಕೊ೦ಳ್ಳುತ್ತಿದ್ದೆ" ಬಿಲಾಲ್ ನುಡಿದರು.
"ನಮ್ಮ ತಂಡವು ಸಾವಿರಾರು ಮಂದಿ ಪ್ರವಾಹ ಪೀಡಿತ ಜನರನ್ನು ಸುರಕ್ಷತ ಸ್ಥಳಗಳಿಗೆ ತಲುಪಿಸಿದೆ. ಈ ದಂಪತಿಗೂ ಸಹ ನಮ್ಮ ವೈದ್ಯಕೀಯ ತಂಡವು ನೆರವು ನೀಡುವುದರೊಡನೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ" ಎನ್ಡಿಆರ್ಎಫ್ನ 9 ನೇ ಬೆಟಾಲಿಯನ್ನ ಕಮಾಂಡೆಂಟ್ ವಿಜಯ್ ಸಿನ್ಹಾ ತಿಳಿಸಿದರು.
ಪ್ರವಾಹ ಪೀಡಿತ ಪರ್ನೇಯಾ, ಮುಜಫರ್ ಪುರ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಆರು ಗರ್ಭಿಣಿ ಮಹಿಳೆಯರನ್ನು ತಮ್ಮ ಪ್ರವಾಹ ಪೀಡಿತ ಹಳ್ಳಿಗಳಿಂದ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು ಮತ್ತು ಅವರುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ದರು.
ಬಿಹಾರದ ಪ್ರವಾಹ ಪರಿಸ್ಥಿತಿ ಇಂದಾಗಿ ಉತ್ತರದ ಮತ್ತು ಪೂರ್ವ ಜಿಲ್ಲೆಗಳಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 70 ಕ್ಕೆ ಏರಿತು ಪ್ರವಾಹ ಸಂತ್ರಸ್ತರನ್ನು ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿ ಕಾರ್ಯವು ವೇಗವಾಗಿ ಮುಂದುವರೆಯಿತು. ಕೆಲವು ಸ್ಥಳಗಳಲ್ಲಿ ನದಿಯ ಪ್ರವಾಹದಿಂದಾಗಿ ಒಡ್ಡುಗಳು ಒಡೆದು ಹೋಗಿರುವುದಾಗಿ ವರದಿಯಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಸತತ ಮೂರನೆಯ ದಿನ ಪ್ರವಾಹ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದ ಅದು ಸಾಧ್ಯವಾಗಲಿಲ್ಲ. "ಸರ್ಕಾರ ಸ್ಥಾಪಿಸಿದ ಪರಿಹಾರ ಶಿಬಿರಗಳಲ್ಲಿ ಸುಮಾರು 50,000 ಪ್ರವಾಹ ಪೀಡಿತ ಜನರಿಗೆ ಉಚಿತ ಆಹಾರ ಮತ್ತು ನೀರು ನೀಡಲಾಗುತ್ತಿದೆ" ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ